ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೀರಶೈವ ಪಂಚಮಸಾಲಿ ಸಮಾಜ ಸಭೆ

Rashmi Kasaragodu
Updated On : 25 Mar 2013, 10:43 am

ಗದಗ: ಜಿಲ್ಲಾ ವೀರಶೈವ ಪಂಚಮಸಾಲಿ ಸಭೆ ಈಚೆಗೆ ಸಮಾಜದ ಸಮುದಾಯ ಭವನದಲ್ಲಿ ನಡೆಯಿತು. ಎಫ್.ವಿ. ಮರಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಪಂಚಮಸಾಲಿ ಜಿಲ್ಲಾ ಸಮಾವೇಶ ಮಾಡಲು ಚರ್ಚಿಸಲಾಯಿತು. ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಪಂ, ಚುನಾವಣೆಯಲ್ಲಿ ಆಯ್ಕೆಯಾದ ಸಮಾಜದ ಸದಸ್ಯರನ್ನು ಸನ್ಮಾನಿಸುವುದು, ಪ್ರತಿ ತಾಲೂಕಿನಿಂದ ಜಿಲ್ಲೆಗೆ 3 ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಜಿಲ್ಲಾ ಸಮಿತಿಯಿಂದ ಮೂವರನ್ನು ರಾಜ್ಯ ಸಮಿತಿಗೆ ನೇಮಿಸುವುದು, ಜಿಲ್ಲೆಯಾದ್ಯಂತ ವೀರಶೈವ ಪಂಚಮಸಾಲಿ ಸಮಾಜದ ಸದಸ್ಯತ್ವಕ್ಕೆ ಅಭಿಯಾನ ಮಾಡುವುದರ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗದಗ ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜದ ಮಹಿಳಾ ಪ್ರದಾನ ಕಾರ್ಯದರ್ಶಿಯಾಗಿ ಎಸ್.ಬಿ. ಪಾಟೀಲರನ್ನು ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷ ನಿಂಗಪ್ಪ ಪಡಗದ, ಬಸವರಾಜ ಅಪ್ಪಣ್ಣವರ, ಎಂ.ಎಸ್. ಪರ್ವತಗೌಡ್ರ, ಸೋಮಣ್ಣ ಮುಳಗುಂದ, ಡಾ೤ ಗವಾಯಿ, ಈರಣ್ಣ ಪಾಟೀಲ, ಉಳವಪ್ಪ ಹೊಂಬಳ, ಸಿದ್ದಣ್ಣ ತುರಕಾಣಿ, ಉಮೇಶ ಮುಳ್ಳಾಳ, ಶಿವಣ್ಣ ನಾಗರಾಳ, ಅಂಗಡಿ, ವೀರಣ್ಣ ಕರಬಿಷ್ಠಿ, ಮಾನೇದ ಗುರುಗಳು, ಹುಳ್ಳಿ, ಪಾರ್ವತೆಮ್ಮ ಮರಿಗೌಡ್ರ, ಎಸ್.ಬಿ. ಪಾಟೀಲ, ವಿ.ಕೆ. ಮಟ್ಟಿ, ಜಗದೀಶ ಚೆನ್ನಪ್ಪಗೌಡ್ರ, ಪ್ರಭು ಹಣ್ಣಿ, ರವಿ ಮಣಕವಾಡ ಉಪಸ್ಥಿತರಿದ್ದರು ಎಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ಅಪ್ಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement