ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹುಯಿಲಗೋಳಗೆ ಸನ್ಮಾನ (ಸುದ್ದಿ ಸಂಕ್ಷೇಪ)

Rashmi Kasaragodu
Updated On : 25 Mar 2013, 10:39 am

ಗದಗ: ಈಚೆಗೆ 12ನೇ ವಾರ್ಡ್‌ನಿಂದ ಗದಗ-ಬೆಟಗೇರಿ ನಗರಸಭೆಗೆ ಆಯ್ಕೆಯಾದ ಶ್ರೀನಿವಾಸ ಹುಯಿಲಗೋಳ ಅವರನ್ನು ಶಂಕರಾಚಾರ್ಯ ಯುವಕ ಮಂಡಳದ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಯುವಕ ಮಂಡಳದ ಉಪಾಧ್ಯಕ್ಷ ಪ್ರೊ೤ ಅನಿಲ ವೈದ್ಯ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀನಿವಾಸ ಹುಯಿಲಗೋಳ ಅವರಿಂದ ಅಭಿವೃದ್ಧಿ ಕಾರ್ಯಗಳು ಜರುಗಲಿ ಎಂದು ಹಾರೈಸಿದರು. ಯುವಕ ಮಂಡಳದ ಅಧ್ಯಕ್ಷ ರಾಮಚಂದ್ರ ಮೋನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಕ ಮಂಡಳದ ರಾಮಚಂದ್ರ ಪೂಜಾರ, ಜಿ.ವಿ. ಕೌಜಲಗಿ, ರವಿ ಪೂಜಾರ, ದತ್ತಂಭಟ್ಟ ತೆಂಬದಮನಿ, ಮಾಲತೇಶಭಟ್ಟ ಜೋಶಿ, ರಮೇಶ ಪೂಜಾರ, ಎಸ್.ಎಲ್. ಕುಲಕರ್ಣಿ ಉಪಸ್ಥಿತರಿದ್ದರು. ಪ್ರೊ೤ ದತ್ತಪ್ರಸನ್ನ ಪಾಟೀಲ ನಿರೂಪಿಸಿ, ವಂದಿಸಿದರು.
ಮತದಾರರ ಶಿಕ್ಷಣ, ಜಾಗೃತಿ ಕಾರ್ಯಕ್ರಮ
ಗದಗ: ಇತ್ತೀಚೆಗೆ ಮತದಾರರ ನೋಂದಣಿ ಮತ್ತು ಮತದಾನ ಪ್ರಮಾಣ ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಜಾಗೃತಿಗಾಗಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ. ಜಿಪಂ ಸಿಇಓ ಅಧ್ಯಕ್ಷತೆಯಲ್ಲಿ 13 ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದ್ದಾರೆ. ಈ ಸಮಿತಿ ಮತದಾರರ, ಮುಖ್ಯವಾಗಿ ಮಹಿಳೆಯರ ನೋಂದಣಿ, ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾನ ಮಾಡುವ ಬಗ್ಗೆ ತಿಳಿವಳಿಕೆ ಮೂಡಿಸಿ, ಮತದಾನದ ಮಹತ್ವ ಸಾರುವ ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಜೆಪಿ ಸಭೆ
ನರಗುಂದ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಮಾ. 25ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸಭೆಯ ಚುನಾವಣೆ ಅಂಗವಾಗಿ ಬಿಜೆಪಿ ಪೂರ್ವಭಾವಿ ಸಭೆ ಕರೆಯಲಾಗಿದೆ.
 ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕ ಶ್ರೀಶೈಲಪ್ಪ ಬಿದರೂರ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಜಿಪಂ ಸದಸ್ಯೆ ಚಂಬವ್ವ ಪಾಟೀಲ, ಶಾಂತವ್ವ ದಂಡಿನ, ಬಿಜೆಪಿ ಮುಖಂಡ ಬಿ.ಎಸ್. ಉಪ್ಪಾರ ಭಾಗವಹಿಸಲಿದ್ದು, ನರಗುಂದ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಜನಪ್ರತಿನಿಧಿಗಳು, ಪಕ್ಷದ ಎಲ್ಲ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗಮಿಸಿ ಚುನಾವಣೆ ಸಿದ್ಧತೆ ಕುರಿತು ತಮ್ಮ ಸಲಹೆ ಸೂಚನೆ ನೀಡುವಂತೆ ನರಗುಂದ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಸ್.ವೈ. ದಂಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement