4 ಕ್ಷೇತ್ರಗಳೂ ಬಿಜೆಪಿಗೆ: ಬಂಡಿ
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 25
ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಗದಗ ಜಿಲ್ಲೆಯ 4 ಮತಕ್ಷೇತ್ರಗಳಲ್ಲೂ ಮತ್ತೆ ಅಧಿಕಾರದ ಗದ್ದಿಗೆ ಹಿಡಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಸೋಮವಾರ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಧಾನಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಲ್ಪ ಅವಧಿಯಲ್ಲಿ ದೇಶ ಮತ್ತು ರಾಜ್ಯದ ಜನ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕಳೆದ ಬಾರಿ ಬಿಜೆಪಿ ಎಲ್ಲ 4 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿಯೂ ಫಲಿತಾಂಶ ಪುನರಾವರ್ತನೆ ಆಗಲಿದೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಬಿ.ಎಸ್. ಪಾಟೀಲ, ಜಿ.ಪಿ. ಪಾಟೀಲ ಮಾತನಾಡಿದರು.
ಜಿಪಂ ಸದಸ್ಯೆ ಶಾಂತಾ ದಂಡಿನ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷ ಶಾರಾದೇವಿ ಶಾನವಾಡಮಠ, ಸದಸ್ಯ ವಿ.ಎನ್. ಕೊಳ್ಳಿ, ಮಲ್ಲಪ್ಪ ಮೇಟಿ, ಮಾಜಿ ಜಿಪಂ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಅಶೋಕ ನವಲಗುಂದ, ಪುರಸಭೆ ಸದಸ್ಯ ಚಂದ್ರಶೇಖರ ಕೋಟಿ, ಶಿವಾನಂದ ಮುತ್ತವಾಡ, ವಾಸು ಜೋಗಣ್ಣವರ, ಚಂದ್ರು ಪವಾರ, ಉಮೇಶ ಕುಡೇನವರ, ಸಿ.ವೈ. ದಂಡಿನ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಸದಸ್ಯ ಎಸ್.ಬಿ. ಕರಿಗೌಡರ, ಸಿ.ಎಸ್. ಪಾಟೀಲ, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎನ್. ಪಾಟೀಲ, ಉಪಾಧ್ಯಕ್ಷ ಪಾಟೀಲ, ರಾಮಚಂದ್ರ ಪವಾರ, ಅನ್ನಪ್ಪಗೌಡ ಪಾಟೀಲ, ಸಂಗಮೇಶ ಪಾಟೀಲ, ಹೊನ್ನಪ್ಪಗೌಡ ಪಾಟೀಲ, ಸಮೀದ ಮುಲ್ಲಾ, ವಿ.ಎಸ್. ಡಾಣೆ, ಸಂಭೋಜಿ ಕಾಶೀದ, ಉಮೇಶ ಯಳ್ಳೂರ, ಉಮೇಶ ಮೊರಬದ, ಚನ್ನಬಸಪ್ಪ ಕಂಠಿ, ರಾಜುಗೌಡ ಪಾಟೀಲ, ಬಾಬು ಹಿರೇಹೋಳಿ, ಕರಿಬಸಣ್ಣವರ, ಹುಂಬಿ, ಅಜ್ಜುಗೌಡ ಪಾಟೀಲ ಉಪಸ್ಥಿತರಿದ್ದರು.