ಇಂದು ಉಪನ್ಯಾಸ
ಲಕ್ಷ್ಮೇಶ್ವರ: ಪಟ್ಟಣದ ಬಾಪೂಜಿ ಐಟಿಐ ಕಾಲೇಜಿನಲ್ಲಿ ಮಾ. 26ರ ಮಧ್ಯಾಹ್ನ 2 ಗಂಟೆಗೆ ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್.ನಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಸಾವಕ್ಕ ಉಪನಾಳ ಹಾಗೂ ಜಿ.ಎಸ್.ಉಪನಾಳರ ದತ್ತಿ ಉಪನ್ಯಾಸಗಳು ಜರುಗಲಿದ್ದು. ಉಪನ್ಯಾಸಕರಾಗಿ ಚುಟುಕು ಸಾಹಿತಿ ವಸಂತರಾವ್ ಜೋಷಿಯವರು 'ಬಡವರ ಬಂಧು ಯಜಮಾನ ಗೂಳಪ್ಪ ಉಪನಾಳ' ಎನ್ನುವ ವಿಷಯ ಕುರಿತು ಹಾಗೂ ಬಂಡಾಯ ಸಾಹಿತಿ ಸಿ.ಜಿ. ಹಿರೇಮಠ ಜನಪದ ಸಾಹಿತ್ಯ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಗದಗ ಜಿಲ್ಲಾ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ನೆರವೇರಿಸುವರು. ಅಧ್ಯಕ್ಷತೆಯನ್ನು ಕೆ.ಎ. ಬಳಿಗೇರ ವಹಿಸುವರು. ಅತಿಥಿಗಳಾಗಿ ದೇವಣ್ಣ ಬಳಿಗಾರ, ಬಸವರಾಜ ಉಪನಾಳ ಹಾಗೂ ಬಾಪೂಜಿ ಐಟಿಐ ಕಾಲೇಜಿನ ಪ್ರಾಚಾರ್ಯ ಕೆ.ನಾಗರಾಜಪ್ಪ ಆಗಮಿಸುವರು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಗಿರೀಶ ಕೋಡಬಾಳ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಕುಷ್ಟಗಿಚಾಳ, ಮಾನ್ವಿಚಾಳ, ಹೆಲ್ತಕ್ಯಾಂಪ್, ಸೆಟ್ಲಮೆಂಟ್.ನಿಂದ ಲೋಯಲಾ ಕಾನ್ವೆಂಟ್ ವರೆಗೆ ಮಂಗಳವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಶಾದಿ ಮಹಲ್.ಗೆ ಭೂಮಿಪೂಜೆ
ನರಗುಂದ: ಉತ್ತಮ ಶಾದಿ ಮಹಲ್ ನಿರ್ಮಿಸಿ, ಮುಸ್ಲಿಂ ಸಮುದಾಯದವರು ಕಾರ್ಯಕ್ರಮ ಮಾಡಲು ಅನುಕೂಲವಾಗಲಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ಈಚೆಗೆ ಅವರು ತಾಲೂಕಿನ ಶಿರೋಳ ಗ್ರಾಮದಲ್ಲಿ ರು. 10 ಲಕ್ಷದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಸ್ಲಿಂ ಸಮುದಾಯದಿಂದ ಶಾಸಕರ ಅನುದಾನದಡಿ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಬೇಡಿಕೆ ಸಲ್ಲಿಸಲಾಗಿತ್ತು. ಕೆಲವು ಕಾರಣಗಳಿಂದ ತಮ್ಮ ಬೇಡಿಕೆ ಈಡೇರಿಸುವಲ್ಲಿ ಸ್ವಲ್ಪ ವಿಳಂಬವಾಗಿದ್ದು, ಆದರೆ ಈಗ ಈ ಕಾರ್ಯ ಕೈಗೂಡಿದೆ. ಈ ಶಾದಿ ಮಹಲ್.ನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು. ಇದರಿಂದ ಉತ್ತಮ ಸಮಾಜ ನಿರ್ಮಿಣವಾಗಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷ ಗುರುದೇವಿ ಶಾನವಾಡಮಠ, ಎಸ್.ಬಿ. ಕರಿಗೌಡರ, ನಿಂಗಣ್ಣ ಗಾಡಿ, ಪ್ರಕಾಶ ತಿರಕನಗೌಡ್ರ, ರಮಜನಸಾಬ ನದಾಫ, ಆರ್.ಪಿ. ನದಾಫ, ಜಿ.ಕೆ.ಅಬ್ಬಿಗೇರಿ, ಬಿ.ಕೆ. ಮರಗುದ್ದಿ ಉಪಸ್ಥಿತರಿದ್ದರು.