ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭೈರಾಪುರಕ್ಕೆ ಸಿಬಿಎಸ್.ಇ ಶಾಲೆ ಶೀಘ್ರ: ಬಂಡಿ

Rashmi Kasaragodu
Updated On : 26 Mar 2013, 11:08 am

ಗಜೇಂದ್ರಗಡ: ಬರುವ ಶೈಕ್ಷಣಿಕ ವರ್ಷದಿಂದ ಭೈರಾಪುರ ಗ್ರಾಮದ ಬಳಿ ಸರ್ಕಾರಿ ಆಂಗ್ಲ ಮಾದ್ಯಮದ (ಸಿಬಿಎಸ್.ಇ) ಶಾಲೆ ಆರಂಭಗೊಳ್ಳಲಿದೆ. ಇದಕ್ಕಾಗಿ ರು. 10 ಕೋಟಿ ಮಂಜೂರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಈಚೆಗೆ ಭೈರಾಪುರ ಗ್ರಾಮ ಬಳಿಯ ಬೆಟ್ಟದ ಮೇಲೆ ಲೋಕೋಪಯೋಗಿ ಇಲಾಖೆಯಿಂದ ರು. 1.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪ್ರವಾಸಿ ಮಂದಿರ ಉದ್ಘಾಟಿಸಿ ಮಾತನಾಡಿದರು. ಮತಕ್ಷೇತ್ರದ ಜನತೆ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ತಾಂತ್ರಿಕ ಕಾಲೇಜು ಸೇರಿ 26ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ. ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿದೆ. ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರಿನ ಕಾಮಗಾರಿಗಾಗಿ ಹಣ ವಿನಿಯೋಗಿಸಲಾಗಿದೆ. ಕಳೆದ ಒಂಭತ್ತು ವರ್ಷದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಕ್ಷೇತ್ರದ ಜನತೆ ಮತ್ತೆ ಆಶೀರ್ವದಿಸಿದರೆ ಗುಡಿಸಲು ಮುಕ್ತ ಮತಕ್ಷೇತ್ರವನ್ನಾಗಿಸುವ ನನ್ನ ಕನಸನ್ನು ನನಸಾಗಿಸಲು ಶ್ರಮಿಸುತ್ತೆನೆ ಎಂದರು. ಜಿಪಂ ಉಪಾದ್ಯಕ್ಷ ರಮೇಶ ಮುಂದಿನಮನಿ, ರಾಜೂರ ಗ್ರಾಪಂ ಅಧ್ಯಕ್ಷ ಕೆ.ಡಿ. ಕಂಬಳಿ, ಗೊಗೇರಿ ಗ್ರಾಪಂ ಅಧ್ಯಕ್ಷ ಹನಮಂತ ಕಮ್ಮಾರ, ಬಿ.ಎಂ. ಸಜ್ಜನ, ಎಚ್.ಎಸ್. ಸೋಂಪುರ, ಪರಶುರಾಮ ಚಿಲಝರಿ, ಯಮನಪ್ಪ ಮೂಗನೂರ, ಕಳಕಪ್ಪ ಹೊಸಮನಿ, ಯಮನಪ್ಪ ಜೊಳ್ಳಿ, ಎಂ.ಎಸ್. ಜಾವೂರ, ಕಳಕೇಶ ರಾಠೋಡ, ಅಭಿಯಂತರ ಎ.ಎಚ್. ಅನಂತಕುಮಾರ, ಎಂ.ಬಿ. ಮುದಿಬಸನಗೌಡ ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಬಂಡಿ
ಗಜೇಂದ್ರಗಡ:
ರೋಣ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ತಮ್ಮ ಯತ್ನ ಫಲಕಾರಿಯಾಗಿದೆ ಎಂದು ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಈಚೆಗೆ ಸಮೀಪದ ಸೂಡಿಯಿಂದ ಕಳಕಾಪುರ ಗ್ರಾಮದವರೆಗಿನ ರಸ್ತೆಗಾಗಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವತಿಯಿಂದ ರು. 2.22 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.  ರೋಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಿಂದ ಕೊಟ್ಯಂತರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳುವ ಮೂಲಕ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಹಲವಾರು ದಶಕಗಳಿಂದ ಸಂಪೂರ್ಣ ಒಣ ಬೇಸಾಯ ಪದ್ಧತಿಯನ್ನೇ ನಂಬಿಕೊಂಡಿರುವ ಕ್ಷೇತ್ರದ ಕೃಷಿಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಾ ಬಂದಿದ್ದಾರೆ. ಹೀಗಾಗಿ ರೈತರಿಗೆ ಮಹತ್ವದ ನೀರಾವರಿ ಸೌಲಭ್ಯ ದೊರಕಿಸಲು ಸರ್ಕಾರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಗ್ರಾಪಂ ಅಧ್ಯಕ್ಷ ಜಗದೀಶ ಕರಡಿ, ಉಪಾಧ್ಯಕ್ಷೆ ಗಂಗಯ್ಯ ಗಡಾದ, ಅಶೋಕ ಶಿರಹಟ್ಟಿ, ಯಮನೂರಸಾಬ ಮಾರನಬಸರಿ, ರೇಣುಕಾ ಪೂಜಾರ, ಗಂಗವ್ವ ಉಂಡಿ, ಎಂಜನಿಯರ ಶೆಟ್ಟರ್, ಸಹಾಯಕ ಅಭಿಯಂತ ಆರ್.ಜಿ. ಪಾಟೀಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement