ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆಯರು ಶಿಕ್ಷಣಕ್ಕೆ ಒತ್ತು ನೀಡಿ: ಮೇತ್ರಾಣಿ

Rashmi Kasaragodu
Updated On : 26 Mar 2013, 11:09 am

ಗದಗ: ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ವಯಂ ಉದ್ಯೋಗ ಹೊಂದುವಂತೆ ಅನಿತಾ ಮೇತ್ರಾಣಿ ಹೇಳಿದರು.
ಸ್ಥಳೀಯ ಸರಾಫ ಬಜಾರ್.ದಲ್ಲಿರುವ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಎಸ್.ಎಸ್.ಕೆ ಮಹಿಳಾ ಮಂಡಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ  ಮಾತನಾಡಿದರು. ಮಹಿಳೆ ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿ, ದೇಶದ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು. ಡಾ. ಸುನಿತಾ ಸಜ್ಜನ ಮಾತನಾಡಿ, ದೈನಂದಿನ ಮನೆಕೆಲಸಗಳನ್ನು ಮಾಡುತ್ತಾ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗದಗ ಎಸ್.ಎಸ್.ಕೆ ಮಹಿಳಾ ಮಂಡಳದ ನೂತನ ಅಧ್ಯಕ್ಷೆ ಲಲಿತಾಬಾಯಿ ಬಾಕಳೆ ಹಾಗೂ ಡಾ. ದೀಪಾ ಹಬೀಬ ಮಾತನಾಡಿದರು. ವಿವಿಧ ನೃತ್ಯರೂಪಕ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಸರೋಜಾಬಾಯಿ ಟೀಕಣದಾರ ಸ್ವಾಗತಿಸಿದರು. ಮಂಡಳದ ಸದಸ್ಯೆ ಜಯಶ್ರೀ ಖಟವಟೆ ನಿರೂಪಿಸಿದರು. ಉಮಾದೇವಿ ಬೇವಿನಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement