ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾರ್ಡ್ ಅಭಿವೃದ್ಧಿಗೆ ಆದ್ಯತೆ

Rashmi Kasaragodu
Updated On : 26 Mar 2013, 11:07 am

ರೋಣ: ಜನತೆಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಜತೆಗೆ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನತೆ ತಮ್ಮ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳುವುದಾಗಿ ಪುರಸಭೆ ಸದಸ್ಯ ಶಫೀಕ ಮೂಗನೂರ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ 22ನೇ ವಾರ್ಡಿನ ಜನತೆ ಹಾಗೂ ಕಲ್ಯಾಣ ನಗರ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ವಾರ್ಡ್ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಜನತೆಗೆ ತೊಂದರೆಯಾದರೆ ಕೂಡಲೇ ಪರಿಹರಿಸುವ ಮನೋಭಾವ ಹೊಂದಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ಅದರಿಂದ ಇತರರಿಗೆ ಒಳಿತಾಗಲಿ. ನಿಸ್ವಾರ್ಥ ಸೇವಾಗುಣ ರಾಜಕಾರಣಿಗಳಲ್ಲಿ ಬೆಳೆಯಲಿ ಎಂದು ಆಶಿಸಿದರು. ಜಿಲ್ಲಾ ಕಾಂಗ್ರೆಸ್ ಮಹಾಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿ, ಸುಭಾಸ ನೀಲಗಾರ ಮಾತನಾಡಿದರು. ಸಾನ್ನಿಧ್ಯವನ್ನು ಪಟ್ಟಣದ ದರ್ಗಾದ ಶಾವಲಿ ಸುಲೇಮಾನ ಅಜ್ಜನವರು ವಹಿಸಿದ್ದರು. ಸಂಗಪ್ಪ ವಕ್ರದ, ಶಿವಣ್ಣ ಬೇನಹಾಳ, ನಿಂಗಪ್ಪ ಶೆಟ್ಟರ, ಮೇಘರಾಜ ಶಿಂಗ್ರಿ, ಪೀರಸಾಬ ಮಾರನಬಸರಿ, ಶಿವಣ್ಣ ಮಣ್ಣೇರಿ, ಮಲ್ಲಯ್ಯ ವಿರಕ್ತಮಠ, ಮರ್ತುಸಾಬ ಬೇಟಗೇರಿ, ಇಮಾಮಸಾಬ ಕೋಲ್ಕಾರ, ಬಸವರಾಜ ಕಿರೇಸೂರ,  ಕರೀಮ ಬಳ್ಳಾರಿ ಉಪಸ್ಥಿತರಿದ್ದರು. ಅಷ್ಫಾಕ ಮುಲ್ಲಾ ಸ್ವಾಗತಿಸಿದರು. ಗೌಸ ಪೀರಣ್ಣವರ ನಿರೂಪಿಸಿದರು. ಲಕ್ಷ್ಮಣ್ಣ ಗೌಡನ್ನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement