ಇಂದು ಎನ್ನೆಸ್ಸೆಸ್ ಶಿಬಿರದಲ್ಲಿ ಉಪನ್ಯಾಸ
ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಜರುಗುತ್ತಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾ. 27 ರಂದು ಸಂಜೆ 6 ಗಂಟೆಗೆ ಗ್ರಾಮೀಣ ಪರಿಸರ ಮತ್ತು ಹಾಸ್ಯ ಕುರಿತು ಉಪನ್ಯಾಸ ಜರುಗಲಿದೆ. ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷೆ ಸುಂದ್ರವ್ವ ಬೇವಿನಕಟ್ಟಿ ವಹಿಸುವರು. ಉಪನ್ಯಾಸಕರಾಗಿ ಪ್ರೊ. ಅನಿಲ ವೈದ್ಯ ಆಗಮಿಸುವರು. ಜುಂಜೇಶ ಗೋಡಿ, ಪದ್ಮಾವತಿ ಹುಲ್ಲೋಜಿ, ಜಿ.ಎಂ. ದೊಡ್ಡಮನಿ, ಜಿ.ಕೆ.ಅರುಂಧತಿ, ಎನ್.ವಿ. ಗಿರಡ್ಡಿ, ಆರ್.ಐ. ಪಾಟೀಲ, ಎಸ್.ಎ. ಯರಗಲ್ಲ, ಮುತ್ತಪ್ಪ ಬದ್ನಿಕಾಯಿ, ಪ್ರೊ. ಆರ್.ಪಿ. ನದಾಫ, ಎ.ಎಸ್. ಸಾವಂತ, ಎಂ.ಎಲ್. ಗೌಡಪ್ಪಗೌಡ್ರ, ಡಾ. ಎಸ್.ಎಂ. ಮಡಿವಾಳರ, ಪ್ರೊ. ಪ್ರದೀಪ ನಾಯ್ಕ ಮುಂತಾದವರು ಪಾಲ್ಗೊಳ್ಳುವರು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ನಾಗರಾಜ ಹಾವಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.