ಇಂದು ವಿಶ್ವ ರಂಗಭೂಮಿ ದಿನಾಚರಣೆ: ಚಿತ್ರ ಪ್ರದರ್ಶನ
ಗದಗ: ಲಯ ಕಲಾ ಮನೆ ಕಲಾವಿದರ ಸಾಂಸ್ಕೃತಿಕ ಸಂಸ್ಥೆ ಗದಗ-ಬೆಟಗೇರಿ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ 20ನೇ ವಾರ್ಷಿಕೋತ್ಸವದ ನಿಮಿತ್ತ ಶಂಕರಗೌಡ ಪಾಟೀಲ ಸಂಗ್ರಹಿಸಿರುವ ರಂಗ ಕಲಾವಿದರ ಪರಿಚಯದ ಚಿತ್ರ ಪ್ರದರ್ಶನವನ್ನು ಮಾ. 27ರ ಬೆಳಗ್ಗೆ 9.30ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಗದಗ-ಬೆಟಗೇರಿ ನಗರಸಭೆಯ ಸದಸ್ಯ ಅನಿಲ ಗರಗ ನೆರವೇರಿಸುವರು. 10 ಗಂಟೆಗೆ ಗಾಂಧಿ ವೃತ್ತದ ಬಳಿಯ ಮರಾಠಿ ವಾಗ್ಮೀಯ ಪ್ರೇಮಿ ಮಂಡಳದ ಸಭಾಭವನದಲ್ಲಿ ರಂಗಭೀಷ್ಮ ಪ್ರಶಸ್ತಿ ಪ್ರದಾನ ಹಾಗೂ ರಂಗಗೀತೆಗಳು ಜರುಗಲಿವೆ. ಅಧ್ಯಕ್ಷತೆಯನ್ನು ರಂಗಭೂಮಿ ಕಲಾವಿದ ಬಸವರಾಜ ಬೆಂಗೇರಿ ವಹಿಸುವರು. ಸನ್ಮಾನವನ್ನು ಮುನವಳ್ಳಿ ಬಾಬಣ್ಣ ನೆರವೇರಿಸುವರು. ಪ್ರಶಸ್ತಿ ಪ್ರದಾನವನ್ನು ಅಜೀತ ಘೋರ್ಪಡೆ ನೆರವೇರಿಸುವರು. ನಂತರ ಅಶೋಕ ಸುತಾರ ಹಾಗೂ ಸಂಗಡಿಗರಿಂದ ರಂಗಗೀತೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.