ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆಯರು ರಂಗೋಲೆ ಕಲೆ ಉಳಿಸಿ

Rashmi Kasaragodu
Updated On : 27 Mar 2013, 11:10 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 26
ಭಾರತೀಯ ಸಂಸ್ಕೃತಿಯ ಪ್ರತೀಕವಾದ ರಂಗೋಲಿ ಕಲೆ ಉಳಿವಿಗೆ ಮಹಿಳೆಯರು ಮುಂದಾಗಬೇಕು. ಮುಂದಿನ ಪೀಳಿಗೆಗೆ ಪಾರಂಪರಿಕ ಕಲೆ ಪರಿಚಯಿಸಿ ಎಂದು ಶಶಿಕಲಾ ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ವಿರೂಪಾಕ್ಷೇಶ್ವರ ದೇಗುಲ ಬಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ನಾಡಿನ ವೈವಿಧ್ಯಮಯ ಸಂಸ್ಕೃತಿ, ಉದಾತ್ತತೆ ಬಿಂಬಿಸುವ ದೇಶೀಯ ಕಲೆಗೆ ಮೊದಲಾದ್ಯತೆ ನೀಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡು ನಾವು ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ಹಲವಾರು ಸಾಧನೆಗಳ ಮೂಲಕ ವಿಶ್ವಕ್ಕೆ ತೋರಿಸಿರುವುದು ಸಂತಸದ ವಿಷಯ. ಮಹಿಳೆ ಇನ್ನೂ ಹೆಚ್ಚು ಹೆಚ್ಚು ಸಾಧನೆ ಗೈದು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ ಎಂದರು.
ಅನ್ನಪೂರ್ಣ ಪಾಟೀಲ ಮಾತನಾಡಿ, ಟೀವಿ ಸಂಸ್ಕೃತಿಯಿಂದ ಹೊರಬಂದು ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಕಡೆಗೆ ಗಮನ ಹರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಮಹಿಳೆಯರ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾಗುವ ರಂಗೋಲಿ ಸ್ಪರ್ಧೆ ಏರ್ಪಡಿಸಿರುವುದು ಅತ್ಯಂತ ಸ್ಮರಣೀಯವಾದದ್ದು ಎಂದರು. ಪುರಸಭೆ ಸದಸ್ಯೆ ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರಮ್ಮ ತಳವಾರ, ಮುಕ್ತುಂಬಿ ಹಣಗಿ, ಕೀರ್ತಿಮಾಲಿನಿ ಘೋರ್ಪಡೆ, ಸುನಂದಾ ವಕ್ಕಲರ, ನೀಲಮ್ಮ ಕುರುಮನಾಳ, ರೇಣುಕಾ ಹೂಗಾರ, ರೋಷನ್ ಮುದಗಲ್, ವೀರಣ್ಣ ಸೊನ್ನದ, ಶಿವರಾಜ ಘೋರ್ಪಡೆ, ಉಮೇಶ ರಾಠೋಡ, ಅಜಿತ್ ವಂದಕುದರಿ, ಪಿ.ಟಿ.ದಾನಿ, ಮುರ್ತುಜಾ ಡಾಲಾಯತ, ಕೊಟ್ರೇಶ ಚಿಲಕಾ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ 47 ಸ್ಪರ್ಧಾಳುಗಳು ಭಾಗವಹಿಸಿದ್ದರು. ಅನ್ನಪೂರ್ಣ ಹದಲಿ (ಪ್ರಥಮ), ಗೀತಾ ರಾಠೋಡ (ದ್ವಿತೀಯ), ಕಾವೇರಿ ರಾಠೋಡ, ಪವಿತ್ರಾ ರಂಗ್ರೇಜ್, ಟಿ.ಟಿ. ಹಬೀಬ, ಐಶ್ವರ್ಯ ರಾಯಬಾಗಿ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ದೀಪಾ ಚನ್ನಿ ಸ್ವಾಗತಿಸಿದರು. ಚಂದ್ರಕಲಾ ನಿರೂಪಿಸಿದರು. ಪವಿತ್ರ ಭಾಂಡಗೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement