ಅಡರಕಟ್ಟಿ: ಸಂಭ್ರಮದ ಓಕುಳಿ
ಲಕ್ಷ್ಮೇಶ್ವರ: ಪಟ್ಟಣ ಸಮೀಪದ ಅಡರಕಟ್ಟಿ ಗ್ರಾಮದ ಯುವಕರು ಬುಧವಾರ ಬೆಳಗ್ಗೆ ಕಾಮದೇವನನ್ನು ದಹಿಸಿ, ಕೇಕೆ ಹಾಕುತ್ತಾ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮದ ಓಕಳಿ ಆಚರಣೆಯಲ್ಲಿ ಮುಳುಗಿದ್ದರು.
ಮುಕ್ತಿ ಪಡೆದುಕೊಳ್ಳಿ: ಸಿದ್ದವೀರ ಶ್ರೀಗಳು
ನರಗುಂದ: ಮನುಷ್ಯ ಸಮಾಜದಲ್ಲಿದ್ದುಕೊಂಡು ಜೀವನದಲ್ಲಿ ಮುಕ್ತಿ ಹೊಂದುವ ಕಾರ್ಯ ಮಾಡುವುದು ಇಂದಿನ ದಿನಗಳಲ್ಲಿ ಅತಿ ಆವಶ್ಯಕವಾಗಿದೆ ಎಂದು ಪತ್ರಿವನ ಮಠದ ಸಿದ್ದವೀರ ಶ್ರೀಗಳು ಹೇಳಿದರು. ಈಚೆಗೆ ಅವರು ಪಟ್ಟಣದ ಜಮಲಾಪುರ ಓಣಿಯ ಕರಿ ಬಸವೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಿಂಗಯ್ಯನನ್ನು ಏಕತೆಯಿಂದ ಪೂಜಿಸಿ, ಅಂತಹ ಪುಣ್ಯಾತ್ಮರ ತತ್ವಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುಕ್ತಿ ಪಡೆದುಕೊಳ್ಳಿರಿ ಎಂದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಟೀಲರು ಶೀಘ್ರ ಗುಣಮುಖರಾಗಿ ಬರಲೆಂದು ಹಾರೈಸಿದರು. ಕರವೇ ಗೌರವಾಧ್ಯಕ್ಷ ರಾಘವೇಂದ್ರ ಗುಜಮಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಾಗಯ್ಯ ಹಿರೇಮಠ, ಸಂಕಪ್ಪ ಶಿತೋಳೆ, ಬಾಬಣ್ಣ ಕಾಲಚೆಟ್ಟಿ ಉಪಸ್ಥಿತರಿದ್ದರು. ಈಶ್ವರಯ್ಯ ಮಠಪತಿ ಸ್ವಾಗತಿಸಿ, ನಿರೂಪಿಸಿದರು. ಪುಲಕೇಶ ವಡ್ಡಗೇರಿ ವಂದಿಸಿದರು.
ನಾಳೆ ಯುವ ಕಾಂಗ್ರೆಸ್ ಸಮಿತಿ ಸಭೆ
ಗದಗ: ಮಾ. 29ರಂದು ಸಂಜೆ 5 ಗಂಟೆಗೆ ತಾಲೂಕಿನ ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಮುಳಗುಂದ ಬ್ಲಾಕ್‌ನ ಎಲ್ಲ ಗ್ರಾಮಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ನೇತೃತ್ವವನ್ನು ಯುವ ಕಾಂಗ್ರೆಸ್ ಮುಖಂಡ ಸಚಿನ್ ಪಾಟೀಲ ವಹಿಸುವರು. ಕಾರಣ ಯುವ ಕಾಂಗ್ರೆಸ್‌ನ ಎಲ್ಲ ಮುಖಂಡರು, ಎಲ್ಲ ಗ್ರಾಮದ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಬೇಕೆಂದು ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೋಶಿ ಹೇಳಿಕೆ ಖಂಡಿಸಿ ಕಲಾಪ ಬಹಿಷ್ಕಾರ
ಲಕ್ಷ್ಮೇಶ್ವರ: ಬಿಜೆಪಿ ರಾಜಾಧ್ಯಕ್ಷ ಪ್ರಹ್ಲಾದ ಜೋಶಿ ನ್ಯಾಯಾಂಗ ಇಲಾಖೆಗೆ ಅವಮಾನಕರವಾಗುವ ರೀತಿಯಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ಬುಧವಾರ ಬೆಳಗ್ಗೆ ಪಟ್ಟಣದ ವಕೀಲರು ಕೋರ್ಟ್ ಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಿದರು. ಪಟ್ಟಣದ ವಕೀಲರ ಸಂಘವು ಬುಧವಾರ ಬೆಳಿಗ್ಗೆ ಸಂಘದ ಅಧ್ಯಕ್ಷ ಎ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪ್ರಹ್ಲಾದ ಜೋಶಿ ಹೇಳಿಕೆಯನ್ನು ಖಂಡಿಸಿ ಮಾತನಾಡಿ, ಪ್ರಹ್ಲಾದ ಜೋಶಿ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಸಿ.ವಿ. ನರಸಮ್ಮನವರ, ಬಿ.ಎಸ್. ಪಾಟೀಲ, ಆರ್.ಸಿ. ಪಾಟೀಲ, ಎಂ.ಎಂ. ಬೊಮ್ಮನಕಟ್ಟಿ, ಎಸ್.ಎಂ .ನಾವಿ, ವಿ.ಎಲ್. ಪಾಟೀಲ, ಬಸವರಾಜ ಬಾಳೇಶ್ವರಮಠ, ಬಿ.ಎಸ್. ಪಾಟೀಲ, ಎನ್.ಎಂ. ಗದಗ, ಎನ್.ಸಿ. ಅಮಾಸಿ, ಜಿ.ಜಿ. ಯತ್ನಳ್ಳಿ, ಭಿಕ್ಷಾವತಿಮಠ, ಎನ್.ಎಂ. ಬಾಡಗಿ, ಎನ್.ಸಿ. ಪಾಟೀಲ, ವೈ.ಬಿ. ಉಮಚಗಿ, ಡಿ.ಡಿ.ದೊಡ್ಡಮನಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.