ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆಜೆಪಿಗೆ ಯುವಕರ ಬೆಂಬಲವಿದೆ: ಬೇವಿನಕಟ್ಟಿ

Rashmi Kasaragodu
Updated On : 28 Mar 2013, 10:52 am

ಕನ್ನಡಪ್ರಭ ವಾರ್ತೆ, ರೋಣ, ಮಾ. 27  
ಕೆಜೆಪಿಯ ತತ್ವ, ಸಿದ್ಧಾಂತ ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ರೋಣ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಲಿದೆ ಎಂದು ಕೆಜೆಪಿ ತಾಲೂಕು ಅಧ್ಯಕ್ಷ ಅಶೋಕ ಬೇವಿನಕಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದೆ. ಅವರು ಸಿಎಂ ಆಗಿದ್ದಾಗ ರೈತರು, ಬಡವರು, ದೀನ ದಲಿತರು, ಶೋಷಿತರಿಗಾಗಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನೊಂದ ಜನರ ಕಣ್ಣೀರನ್ನು ಒರೆಸಲು ಮುಂದಾದಾಗ ಅವರನ್ನು ಬಿಜೆಪಿಯವರು ಕುತಂತ್ರದಿಂದ ಅಧಿಕಾರದಿಂದ ಕೆಳಗಿಳಿಸಿರುವುದನ್ನು ಜನತೆ ಮರೆತಿಲ್ಲ ಎಂದರು. ಕೆಜೆಪಿ ಯುವ ಮುಖಂಡ ಕುಮಾರ ಹಕಾರಿ ಮಾತನಾಡಿ, ಯಡಿಯೂರಪ್ಪನವರ ಅಭಿವೃದ್ಧಿಪರ ಕಾಳಜಿ ಮತ್ತು ಅವರು ನಾಡಿಗೆ ನೀಡಿದ ಕೊಡುಗೆಗಳೇ ಕೆಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ. 5 ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಶಾಶ್ವತವಾಗಿ ಮೂಲೆ ಗುಂಪಾಗುತ್ತೇವೆ ಎಂಬ ಹೊಟ್ಟೆಕಿಚ್ಚಿನಿಂದ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹತಾಶೆಯಿಂದ ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರದಿಂದ ಕೆಳಗಿಳಿಸಿದವು. ಈ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದರು. ರೋಣ ವಿಧಾನಸಭೆ ಕ್ಷೇತ್ರದ ಕೆಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ರೋಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಶೋಕ ಬೇವಿನಕಟ್ಟಿ, ಉಪಾಧ್ಯಕ್ಷರಾಗಿ ಹೇಮಂತ ಹಾರೋಗೇರಿ, ರೋಣ ನಗರ ಘಟಕದ ಅಧ್ಯಕ್ಷರಾಗಿ ಸುರೇಶ ಸಜ್ಜನ, ಪ್ರಧಾನ ಕಾರ್ಯದರ್ಶಿಯಾಗಿ ಕುಮಾರ ಭಂಡಾರಿ, ಎಸ್‌ಸಿ, ಎಸ್‌ಟಿ, ಘಟಕದ ಅಧ್ಯಕ್ಷರಾಗಿ ಚಂದ್ರು ಹಂಚಿನಾಳ, ನರೇಗಲ್ ಘಟಕದ ಅಧ್ಯಕ್ಷರಾಗಿ ಬಸವರಾಜ ಸಿದ್ನೆಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಹಳ್ಳದಮನಿ, ವಕ್ತಾರರಾಗಿ ಸುಂಕಪ್ಪ ನವಲಗುಂದ, ಗಜೇಂದ್ರಗಡ ಘಟಕದ ಅಧ್ಯಕ್ಷರಾಗಿ ವೆಂಕಟೇಶ ಮುದಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಸಂಗಮೇಶ ವೀರಕ್ತಮಠ, ರಾಜು ಕುರಡಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement