ಇಂದು ಕಬಡ್ಡಿ ಪಂದ್ಯಾವಳಿ
ಗದಗ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗದಗ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕೆಸರು ಗದ್ದೆ ಕಬಡ್ಡಿ ಪಂದ್ಯಾವಳಿಯನ್ನು ಮಾ. 29ರಂದು ಬೆಳಗ್ಗೆ 10 ಗಂಟೆಗೆ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಆಯೋಜಿಸಿದೆ. ಅಭಾವಿಪ ಬೆಂಗಳೂರಿನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ ಉದ್ಘಾಟಿಸುವರು. ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎನ್. ಗೌಡರ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಆಗಮಿಸುವರು. ಎನ್. ರವಿಕುಮಾರ ಸಮಾರೋಪ ಭಾಷಣ ಮಾಡುವರು. ಬಹುಮಾನ ವಿತರಕರಾಗಿ ಕುಮಾರ ಹಕಾರಿ, ವರುಣ ಸಂಗನಾಳ, ಮಹೇಶ ಹೆರಕಲ್, ಜಗದೇವ ಮೆಣಸಗಿ ಆಗಮಿಸುವರು ಎಂದು ಎಂ. ಉಮೇಶ ಮತ್ತು ಬಿ.ಎನ್. ತಾರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.