ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾಜಿ ದೇವದಾಸಿಯರ ಆರೋಗ್ಯ ತಪಾಸಣೆ

Rashmi Kasaragodu
Updated On : 29 Mar 2013, 12:57 pm

ಗದಗ:   ಮಾಜಿ ದೇವದಾಸಿಯರು ಆರೋಗ್ಯದತ್ತ ಹೆಚ್ಚನ ಗಮನವನ್ನು ಹರಿಸಬೇಕು, ಕಾಲಕಾಲಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ.ರಾ.ಮ.ಅ. ನಿಗಮದಿಂದ ಜರುಗುವ ಆರೋಗ್ಯ ತಪಾಸಣಾ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾ೤ ಡಿ.ಬಿ. ಚನ್ನಶೆಟ್ಟಿ ಹೇಳಿದರು. ಗದಗ ಜಿಲ್ಲಾ ದೇವಸಾಸಿ ಪುನರ್ವಸತಿ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಮಾಜಿ ದೇವದಾಸಿಯರ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ೤ ಅರುಂದತಿ ಕುಲಕರ್ಣಿ ಏಡ್ಸ್ ತಡೆಗಟ್ಟುವಿಕೆ, ನಿಯಂತ್ರಣ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸಾಸಿ ಪುನರ್ವಸತಿ ಘಟಕ ಯೋಜನಾ ಅಧಿಕಾರಿ ಆರ್.ಜೆ. ಲಮಾಣಿ ಮಾತನಾಡಿದರು ಪಿಡಿಓ ಜಗದೀಶ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement