ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಳಗುಂದ: ಸಂಭ್ರಮದ ಹೋಳಿ ಆಚರಣೆ

Rashmi Kasaragodu
Updated On : 29 Mar 2013, 12:55 pm

ಮುಳಗುಂದ: ಶಾಂತಿ ಸೌಹಾರ್ದತೆಗೆ ಹೆಸರಾದ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಮುಖ ಬಿದಿಗಳಲ್ಲಿ ರತಿ-ಮನ್ಮಥ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯರಾತ್ರಿ ಕಾಮದಹನ ಮಾಡಲಾಯಿತು. ಬೆಳಗ್ಗೆಯಿಂದಲೇ ವಿವಿಧ ವೇಷಧರಿಸಿದ ಮಕ್ಕಳು, ಯುವಕರು ಸೇರಿದಂತೆ ಪಟ್ಟಣದ ಜನತೆ ಪರಸ್ಪರ ರಂಗುರಂಗಿನ ಬಣ್ಣ ಹಚ್ಚಿಕೊಂಡು ಸಡಗರದಿಂದ ಹೋಳಿ ಆಚರಿಸಿದರು. ಪ್ರಮುಖವಾಗಿ  ಚಿಂದಿಪೇಟಿ, ಸವಳಭಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ವಿವಿಧ ವೇಷ ಧರಿಸಿ ಆಕರ್ಷಿಸಿದರು. ಪ್ರಮುಖ ಬೀದಿಯಲ್ಲಿ ಹಲಿಗೆ ಬಾರಿಸುತ್ತ ಹೋಳಿ ಆಚರಣೆಯಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement