ರೋಣ: ಸಡಗರದ ಹೋಳಿ ಆಚರಣೆ
ಕನ್ನಡಪ್ರಭ ವಾರ್ತೆ, ರೋಣ, ಮಾ. 28
ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಗುರವಾರ ಪರಸ್ಪರ ಬಣ್ಣ ಎರಚುತ್ತಾ ಸಡಗರದಿಂದ ಹೋಳಿ ಆಚರಿಸಿದರು.
ರಾತ್ರಿ ಕಾಮದಹನವನ್ನು ಮಾಡಿದರು. ಬೆಳಗಾಗುತ್ತಿದಂತೆ ಮಕ್ಕಳು, ಯುವಕರು, ಮಹಿಳೆಯರು ಮತ್ತು ವೃದ್ಧರಾದಿಯಾಗಿ ಬಣ್ಣದಾಟದಲ್ಲಿ ತೊಡಗಿದರು. ತಾಲೂಕಿನ ಹುಲ್ಲೂರ, ಬಾಸಲಾಪುರ, ಹೊಸಳ್ಳಿ, ಇಟಗಿ, ಜಿಗಳೂರ,ಚಿಕ್ಕಮಣ್ಣೂರ, ಸಂದಿಗವಾಡ, ಮಲ್ಲಾಪುರ, ಮೇಲ್ಮಠ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬುಧವಾರ ಹೋಳಿ ಹುಣ್ಣಿಮೆ ದಿನದಂದು ಕಾಮದಹನ ಮಾಡಿ ರಂಗಿನಾಟವಾಡಿದರು. ರೋಣ, ಗಜೇಂದ್ರಗಡ ಮತ್ತು ನರೇಗಲ್ ಪಟ್ಟಣ ಸೇರಿದಂತೆ ಬೆಳವಣಕಿ, ಯಾವಗಲ್, ಕರಮಡಿ, ಅಬ್ಬಿಗೇರಿ, ಅಸೂಟಿ, ಮಾಳವಾಡ, ಹೊಳೆಆಲೂರ, ಹಿರೇಹಾಳ ಕೊತಬಾಳ ಸೇರಿದಂತೆ ವಿವಿಧೆಡೆ ಗುರವಾರ ಹುಣ್ಣಿಮೆಯ ಮರು ದಿನ ಕಾಮದಹನ ಮಾಡಿ ಬಣ್ಣದೋಕುಳಿಯಲ್ಲಿ ತೊಡಗಿದ್ದರು. ಮುಲ್ಲಾನ ಬಾವಿ, ಬಸ್ಸ್ಟ್ಯಾಂಡ್, ಹಳೆ ತಹಸೀಲ್ದಾರ್ ಕಚೇರಿ, ಸೂಡಿ ಕ್ರಾಸ್ ಪೋತರಾಜನ ಕಟ್ಟೆಯ ಯುವಕರ ಎರಡು ಗುಂಪುಗಳು ಪರಸ್ಪರ ಸ್ಪರ್ಧಿಗಳಂತೆ ತ್ರಿಪದಿ ಸಾಲಿನ ವಿವಿಧ ರೀತಿಯ ಹೊಳಿ ಪದಗಳನ್ನು ಹಾಡುತ್ತಾ ಜನರನ್ನು ರಂಜಿಸಿದರು. ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಭಾವೈಕ್ಯದಿಂದ, ಶಾಂತಿಯುತವಾಗಿ ಆಚರಿಸಿದರು