ಧರ್ಮ ಕಾರ್ಯಗಳಿಂದ ಆತ್ಮಸಾಕ್ಷಾತ್ಕಾರ: ಶಿವಾಚಾರ್ಯರು
ಕನ್ನಡಪ್ರಭ ವಾರ್ತೆ, ಗದಗ, ಮಾ. 29
ಮೋಕ್ಷ, ಆತ್ಮ ಸಾಕ್ಷಾತ್ಕಾರಕ್ಕೆ ಸಕಲ ಜೀವರಾಶಿಗಳಲ್ಲಿ ಮನುಷ್ಯ ಜೀವ ಅತ್ಯಂತ ಸೂಕ್ತವಾದುದ್ದು, ಪುರಾಣ ಪ್ರವಚನ, ಧರ್ಮ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನರೇಗಲ್ಲ ಮತ್ತು ಸವದತ್ತಿ ಬ್ರಹನ್ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಅವರು ಸೋಮವಾರ ಸ್ಥಳೀಯ ಮುಳಗುಂದ ನಾಕಾ ಹತ್ತಿರದ ರೇಣುಕ ನಗರದ ರೇಣುಕ ಮಂದಿರದಲ್ಲಿ ರೇಣುಕಾಚಾರ್ಯರ ಜಯಂತಿ, ರಥೋತ್ಸವ ಹಾಗೂ ಶ್ರೀರೇಣುಕ ವಿಜಯ ಪುರಾಣ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಸದಾ ದುಡಿಮೆ, ಹಣ ಸಂಪಾದನೆ, ಲೌಕಿಕ ವಿಷಯಗಳಲ್ಲಿ ತಲ್ಲಿನನಾಗಿರುವ ಮನುಷ್ಯನನ್ನು ಪುರಾಣ, ಪ್ರವಚನ, ಧರ್ಮಚಿಂತನೆಗಳು ಬಡಿದೆಬ್ಬಿಸಿ ಅಂತರಂಗ ಶುದ್ಧಗೊಳಿಸಿ ಜೀವನ ಪಾವನಗೂಳಿಸುವ ಮಹಾತ್ಮರ ದಿವ್ಯ ಸಂದೇಶಗಳನ್ನು ತಿಳಿಸುತ್ತವೆ. ಕಾರಣ ನಿಮ್ಮ ನಿತ್ಯ ಕೆಲಸ ಕಾರ್ಯಗಳೊಂದಿಗೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿರಿ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ವಿ.ಆರ್. ಮಾಳೆಕೊಪ್ಪಮಠ, ನಗರಸಭೆಯ ಸದಸ್ಯ ಎಂ.ಸಿ. ಶೇಖ, ಪಶುಪತಯ್ಯ(ಬಾಬಣ್ಣ) ಶಾಬಾದಿಮಠ, ಬಸಣ್ಣ ಮಲ್ಲಾಡದ, ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಈಶ್ವರಪ್ಪ ಬೇಲೇರಿ, ಎಂ.ಜಿ. ಸಂತೋಜಿ, ವಿ.ಕೆ.ಗುರುಮಠ, ವೇದ ಪಾಠಶಾಲೆಯ ಕಾರ್ಯಾಧ್ಯಕ್ಷ ಶಿದ್ದಲಿಂಗಪ್ಪ ಚಳಗೇರಿ, ಬಸವರಾಜ ಶಾಬಾದಿಮಠ, ಸುರೇಶ ಅಬ್ಬಿಗೇರಿ, ವೀರಣ್ಣ ದನ್ನೂರಹಿರೇಮಠ, ಚಂದ್ರು ಅಬ್ಬಿಗೇರಿ, ಬಸವಣ್ಣಪ್ಪ ಪುರದ, ಪ್ರವಚನಕಾರ ರುದ್ರಮುನಿ ಶಾಸ್ತ್ರಿಗಳು, ಪರಶುರಾಮ ಮಂಗಳಗುಡ್ಡ, ಶಾಮರಾವ್ ಕುಲಾರಿ ಪಾಲ್ಗೊಂಡಿದ್ದರು.
ಪಂಚಾಚಾರ್ಯ ವೇದ ಪಾಠಶಾಲೆಯ ವಟುಗಳು ಪ್ರಾರ್ಥಿಸಿದರು. ನಗರಸಭೆಯ ಮಾಜಿ ಸದಸ್ಯ ಎಂ.ಎಂ. ಹಿರೇಮಠ ಸ್ವಾಗತಿಸಿದರು. ಬೆಟದಯ್ಯ ಹಿರೇಮಠ ನಿರೂಪಿಸಿದರು. ಚಂದ್ರು ಬಾಲಿಹಳ್ಳಿಮಠ ವಂದಿಸಿದರು.