ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಂಬಲಿಗರ ಜತೆ ಕಾಂಗ್ರೆಸ್ ಸೇರಿದ ತಿಪ್ಪಣ್ಣ

Vishwanath S
Updated On : 30 Mar 2013, 11:08 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 29
ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ನಿವಾಸದಲ್ಲಿ ಈಚೆಗೆ ಪುರಸಭೆಯ ಮಾಜಿ ಸದಸ್ಯ ತಿಪ್ಪಣ್ಣ ಸಂಶಿಯವರು ತಮ್ಮ ಹಲವು ಬೆಂಬಲಿಗೆರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ನಾಟಕಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕೊನೆಯ ಪರದೆಯನ್ನು ಮತದಾರರು ಎಳೆಯಲಿದ್ದಾರೆ. ಕಾಂಗ್ರೆಸ್ ಪಕ್ಷವು ಜನರ ಕೆಲಸಗಳನ್ನು ಮಾಡಿಕೊಡುವ ಮೂಲಕ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಅಧಿಕಾರ ಮಾಡುತ್ತದೆ. ಆದರೆ, ಬಿಜೆಪಿ ಸರ್ಕಾರ ಜನರ ಪ್ರೀತಿ ವಿಶ್ವಾಸವನ್ನು ಕೇವಲ ಹಣದ ಮೂಲಕ ಅಳೆಯುವ ಪ್ರಯತ್ನ ಮಾಡಿದ್ದು ನೋವಿನ ಸಂಗತಿಯಾಗಿದೆ. ಪಕ್ಷವನ್ನು ಮಾನಸಿಕವಾಗಿ ಪ್ರೀತಿಸುವ ಗುಣವನ್ನು ಬೆಳೆಸಿಕೊಂಡು ಪಕ್ಷದಲ್ಲಿ ಕಾರ್ಯ ಚಟುವಟಿಕೆ ಮಾಡಿದಲ್ಲಿ ಪಕ್ಷದ ಬಲವರ್ಧನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ, ತಾಪಂ ಸದಸ್ಯ ಚೆನ್ನಪ್ಪ ಜಗಲಿ ಹಾಗೂ ಪುರಸಭೆಯ ಮಾಜಿ ಸದಸ್ಯ ತಿಪ್ಪಣ್ಣ ಸಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲಕ್ಷ್ಮಣ ಸಾತಪುತೆ, ಮಂಜುನಾಥ ಬಸಾಪುರ, ಶಿವಪ್ಪ ಬಸಾಪುರ, ಮಹಾದೇವಪ್ಪ ಕುರಿ, ಅಹ್ಮದ ಕಾರಡಗಿ, ಅಫ್ಜಲ್ ರಿತ್ತಿ ಮುಂತಾದವರು ಪಕ್ಷಕ್ಕೆ ಸೇರ್ಪಡೆಯಾದರು.
ಪುರಸಭೆಯ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಅಡಿವೆಪ್ಪ ಬೆಟಗೇರಿ, ಪರಮೇಶ ಲಮಾಣಿ, ಪುರಸಭೆಯ ಸದಸ್ಯ ಲೆಂಕೆಪ್ಪ ಸೆರಸೂರಿ, ಗುರಪ್ಪ ಲಮಾಣಿ, ಮುತ್ತಣ್ಣ ಬಟ್ಟೂರ, ಕಿರಣ ನವಲೆ, ನಾಗರಾಜ ಪಾಟೀಲ, ಪೂರ್ಣಾಜಿ ಖರಾಟೆ, ನೀಲಪ್ಪ ಸೆರಸೂರಿ, ಶೇಖಪ್ಪ ಪಾಟೀಲ ಮುಂತಾದವರುಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement