ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತದಾರ ಜೆಡಿಎಸ್,ಗೆ ಆಶೀರ್ವದಿಸಲಿದ್ದಾನೆ

Vishwanath S
Updated On : 30 Mar 2013, 11:13 am

ನರೇಗಲ್ಲ: ಈ ಬಾರಿಯ ಚುನಾವಣೆಯಲ್ಲಿ ರೋಣ ಮತಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಹೊಸಬರ ಹುಡುಕಾಟದಲ್ಲಿರುವ ಮತದಾರರು ಖಂಡಿತ ಜೆಡಿಎಸ್,ನ್ನು ಆಶೀರ್ವದಿಸಲಿದ್ದಾರೆ ಎಂದು ರೋಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಹೇಳಿದರು.
ಅವರು ಈಚೆಗೆ ಸ್ಥಳೀಯ ವಿವಿಧ ಪಕ್ಷಗಳ ಮುಖಂಡರು ತಮ್ಮ ಮೂಲ ಪಕ್ಷಗಳನ್ನು ತೊರೆದ ಶರಣಪ್ಪ ಬಳ್ಳಾರಿ, ಮಹೇಶ ಕೋಗಿಲೆ, ಪ್ರಕಾಶ ಹೂಲಗೇರಿಯವರ ನೇತೃತ್ವದಲ್ಲಿ ಜೆಡಿಎಸ್,ಗೆ ಸೇರ್ಪಡೆಗೊಂಡರನ್ನು ಸ್ವಾಗತಿಸಿ ಮಾತನಾಡಿದರು.
ಇನ್ನು ಕೆಲವೇ ದಿನಗಳಲ್ಲಿ ಇನ್ನೂ ಅನೇಕ ಮುಖಂಡರು ಜೆಡಿಎಸ್,ನ್ನು ಸೇರಲಿದ್ದಾರೆ. 20 ತಿಂಗಳು ಈ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿ ಜನಮಾನಸದಲ್ಲಿ ಉಳಿದಿರುವ ಎಚ್.ಡಿ. ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.
ರೋಣ ತಾಲೂಕು ಜೆಡಿಎಸ್,ನ ಅಧ್ಯಕ್ಷ ರಾಮಣ್ಣ ಸಕ್ರೋಜಿ, ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ದುಡಿದರೆ ಈ ಬಾರಿ ಹೊರೆಹೊತ್ತ ಮಹಿಳೆಯನ್ನು ರೋಣ ಮತಕ್ಷೇತ್ರದಲ್ಲಿ ಗೆಲ್ಲಿಸಬಹುದು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗಂಗಾಧರ ಕೊಟಗಿ, ಪಪಂನ ಮಾಜಿ ಅಧ್ಯಕ್ಷ ದಾವೂದಲಿ ಕುದರಿ, ಅಂದಪ್ಪ ಬಿಸನಳ್ಳಿ, ಅಂದಪ್ಪ ಕುಂಬಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement