ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೋಳಿಯಿಂದ ಭಾವೈಕ್ಯ ಸಂದೇಶ

Vishwanath S
Updated On : 30 Mar 2013, 11:10 am

ಗಜೇಂದ್ರಗಡ: ಧಾರ್ಮಿಕ ಆಚರಣೆಗಳು ಸಮುದಾಯಗಳ ಒಗ್ಗೂಡಿಸುವ ಜತೆಗೆ ಮಾನವೀಯ ಮೌಲ್ಯಗಳು ವೃದ್ಧಿಸಲು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಹೋಳಿ ಆಚರಣೆ ಭಾವೈಕ್ಯದ ಸಂದೇಶ ಸಾರುತ್ತವೆ ಎಂದು ಪುರಸಭೆ ಸದಸ್ಯ ಸಿದ್ದಪ್ಪ ಬಂಡಿ ಹೇಳಿದರು.
ಅವರು ಬುಧವಾರ ರಾತ್ರಿ ಪಟ್ಟಣದ ವಾಣಿಪೇಟೆಯಲ್ಲಿ ಕಾಲಕಾಲೇಶ್ವರ ಯುವಕ ಮಂಡಳ ವತಿಯಿಂದ ಹೋಳಿ ಹುಣ್ಣಿಮೆ ನಿಮಿತ್ತ ನಡೆದ ಕಾಮ ರತಿದೇವರ ಪ್ರತಿಷ್ಠಾಪನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪರಪ್ಪ ಸಂಕನೂರ, ಅತಿಥಿಗಳಾಗಿ ಆಗಮಿಸಿದ್ದ ಎಚ್.ಎಸ್. ಸೋಂಪುರ, ಶರಣಪ್ಪ ರೇವಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಭು ಚವಡಿ, ಅಶೋಕ ವನ್ನಾಲ, ಶಿವಪ್ಪ ಸಂಕನೂರ, ರವಿ ಕಲಾಲ, ಮಂಜುನಾಥ ಬಡಿಗೇರ, ತೇಜಪ್ಪ ಚಿನ್ನೂರ, ಶಿವಪುತ್ರಪ್ಪ ಸಂಕನೂರ, ವೀರಭದ್ರಪ್ಪ ಡೊಳ್ಳಿನ, ರಂಗಪ್ಪ ಚಿನ್ನೂರ, ಭವಾನಸಾ ಬಾಕಳೆ, ನಾಗಪ್ಪ ಮಾಳಗಿ ಇದ್ದರು. ಇದೇ ಸಂದರ್ಭ ಸ್ಥಳೀಯ ಚೈತ್ರಾ ಮೇಲೋಡಿಸ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement