ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಎಲುಬು ಕೀಲು ತಪಾಸಣಾ ಶಿಬಿರ

Rashmi Kasaragodu
Updated On : 31 Mar 2013, 11:59 am

ನರಗುಂದ: ಪಟ್ಟಣದ ಸಿದ್ದಲಿಂಗೇಶ್ವರ ಕಂಪ್ಯೂಟರ್ ತರಬೇತಿ ಕೇಂದ್ರದ ವಾರ್ಷಿಕೋತ್ಸವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ತರಬೇತಿ ಕಾರ್ಯಕ್ರಮ ನಿಮಿತ್ಯ ಉಚಿತ ಎಲುಬು ಕೀಲು ತಪಾಸಣಾ ಶಿಬಿರವನ್ನು ಮಾ. 31ರ ಭಾನುವಾರ ಪಟ್ಟಣದ ಅಸೂಟಿಯವರ ಕಾಂಪ್ಲಕ್ಸ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಡಾ. ಸತೀಶ ನೇಸರಿ, ಡಾ. ಗೀರೀಶ ಮರಡ್ಡಿ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಶಿಶು ಅಭಿವೃದ್ದಿ ಅಧಿಕಾರಿ ಟಿ.ಜಿ. ಶಂಕರಮೂರ್ತಿ, ತಾಲೂಕು ವಿಕಲಚೇತನರ ಅಧ್ಯಕ್ಷ ಸಿದ್ದಪ್ಪ ಮರ್ಚಕ್ಕನವರ, ಪಿ.ವೈ. ಕೋರ್ತಿ ಭಾಗವಹಿಸುವರು ಎಂದು ಪ್ರಕಟಿಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಸಿದ್ರಾಮೇಶ್ವರ ನಗರ, ಬ್ಯಾಂಕರ್ಸ್ ಕಾಲೋನಿ, ಕೇಶವ ನಗರ, ಡಾ. ಬಸಯ್ಯ ಲೈನ್, ವೀರೇಶ್ವರ ನಗರ, ಜಯಶ್ರೀ ಪವಾರ ಲೈನ್, ಗಡ್ಡಿಯವರ ಲೈನ್, ತಾಜ್ ನಗರ, ಡಿ.ಸಿ. ಆಪೀಸ್, ಚಿಕ್ಕಲಿಗಾರ ಓಣಿ, ಮೂರಶಿಳ್ಳೀನ ಚಾಳ, ತಿಪ್ಪಾಪೂರ ಲೈನ್, ರಾಧಾಕೃಷ್ಣ ನಗರದ ಉಳಿದ ಭಾಗಗಳಲ್ಲಿ ಭಾನುವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ಇಂದು ಹಾಸ್ಯ ಕಾರ್ಯಕ್ರಮ
ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗದುಗಿನ ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಯುವ ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಗವಿಸಿದ್ದಯ್ಯ ಹಳ್ಳಿಕೇರಿಮಠ ಹಾಗೂ ಸಂಗಡಿಗರಾದ ರಾಕೇಶ ಹಿರೇಮನಿ, ಮಹಾಂತೇಶ ನಾಯಕವಾಡಿ, ಶರಣು ಯಮನೂರ, ಸಿದ್ದಲಿಂಗಯ್ಯ ವಿರಕ್ತಮಠ. ರಾಜೇಶ ಹಿರೇಮನಿ, ಮಹಾಂತೇಶ ನಾಯಕವಾಡಿ, ಶರಣು ಯಮನೂರ, ಸಿದ್ದಲಿಂಗಯ್ಯ ವಿರಕ್ತಮಠ, ಬಸವರಾಜ ಹಳ್ಳಿಕೇರಿ, ಬೀರೇಶ ಪೂಜಾರ, ಕಾಶೀನಾಥ ಚುಂಗಿನ, ಸಾವಿತ್ರಮ್ಮ ಎಲಿಗಾರ, ಐಶ್ವರ್ಯ ಅಗಸಿಮನಿ, ರಂಗನಾಥ ದಾಸರ ಅವರಿಂದ ಜನಪದ ಹಾಸ್ಯ ಕಾರ್ಯಕ್ರಮ ಮಾ. 31ರಂದು ರಾತ್ರಿ 1 ಗಂಟೆಗೆ ಜರುಗಲಿದೆ. ಸಾನ್ನಿಧ್ಯವನ್ನು ಹೊಸಹಳ್ಳಿಯ ಬೂದೀಶ್ವರ ಶ್ರೀಗಳು ವಹಿಸಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement