ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಲಿಕೆಗೆ ಪೂರಕ ವಾತಾವರಣ ಅಗತ್ಯ: ಕಿರೇಸೂರ

Rashmi Kasaragodu
Updated On : 31 Mar 2013, 11:59 am

ಕನ್ನಡಪ್ರಭ ವಾರ್ತೆ, ರೋಣ, ಮಾ. 30
ಮಕ್ಕಳಲ್ಲಿನ ಆಸಕ್ತಿ, ಅಭಿರುಚಿಗೆ ತಕ್ಕಂತೆ ಶಿಕ್ಷಣ ಕಲ್ಪಿಸುವುದರೊಂದಿಗೆ ಕಲಿಕೆಗೆ ಪೂರಕ ವಾತಾವರಣ ಅತ್ಯಗತ್ಯ ಎಂದು ನ್ಯಾಯವಾದಿ ಇಂದಿರಾ ಕಿರೇಸೂರ ಹೇಳಿದರು.
ಸ್ಥಳೀಯ ಬನಶಂಕರಿ ದೇವಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಇತ್ತೀಚೆಗೆ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡದೆ, ಮಕ್ಕಳ ಜೀವನ ರೂಪಿಸುವಂತೆ ನೀಡಬೇಕು. ಶೈಕ್ಷಣಿಕವಾಗಿ ಪ್ರಗತಿ ಹೊಂದಲು ನಮಗೆ ಉತ್ಕೃಷ್ಟ ಪಠ್ಯಕ್ರಮ ಅಗತ್ಯ. ಸಮಾಜ ಪರಿವರ್ತನೆ ಹೊಂದಲು ಶಿಕ್ಷಣ ಬುನಾದಿಯಾಗಿದೆ. ಶಿಕ್ಷಣದಿಂದಲೇ ಎಲ್ಲವನ್ನು ಸಾಧಿಸಬಹುದಾಗಿದೆ. ಆ ದಿಶೆಯಲ್ಲಿ ಶಿಕ್ಷಕರ ಕರ್ತವ್ಯ ಪ್ರಮುಖವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಯಾವ ರೀತಿ ಸಿದ್ಧಗೊಳಿಸಬೇಕು ಎಂಬುದನ್ನು ಪಾಲಕರು ತಿಳಿದು ಮಕ್ಕಳನ್ನು ತರಬೇತಿಗೊಳಿಸಬೇಕು ಎಂದರು.
ಅಬ್ದುಲ್ಸಾಬ ಹೊಸಮನಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ, ನೈತಿಕತೆ ಮುಖ್ಯವಾಗಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವುದರೊಂದಿಗೆ ಉತ್ತಮ ವ್ಯಕ್ತಿತ್ವ ನಿರ್ಮಿಸುವಲ್ಲಿ ಶಿಕ್ಷಕದ ಪಾತ್ರ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣವನ್ನು ಸದ್ಬಳಕೆ ಮಾಡಿಕೊಂಡು ಮಾದರಿ ವ್ಯಕ್ತಿಗಳಾಗಿ ಜೀವನ ಸಾಗಿಸಬೇಕು ಎಂದರು.
ನ್ಯಾಯವಾದಿ ವಿ.ಡಿ. ಪಾವಸ್ಕರ ಮಾತನಾಡಿದರು. ಹುಚ್ಚಪ್ಪ ನವಲಗುಂದ, ರಂಗನಗೌಡ ಅಚ್ಚಿನಗೌಡ್ರ, ಮಹಾದೇವಪ್ಪ ನವಲಗುಂದ, ಪುರಸಭೆ ಸದಸ್ಯ ಅಜ್ಜಪ್ಪ ರಡ್ಡೇರ, ಮಂಜುನಾಥ ಹಾಳಕೇರಿ, ಮಾಬುಸಾಬ ಸಂಕನೂರ, ಪುರಸಭೆ ಮಾಜಿ ಸದಸ್ಯ ಕೆ.ಕೆ. ಮುಲ್ಲಾ, ಸುರೇಶ ಜಗ್ಗಲ, ಶಿವಪುತ್ರಪ್ಪ ಜಗ್ಗಲ, ಶಿವು ಹುಲ್ಲೂರ ಉಪಸ್ಥಿತರಿದ್ದರು. ಮಲ್ಲನಗೌಡ ಪಾಟೀಲ್ ಸ್ವಾಗತಿಸಿದರು. ಜಗದೀಶ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಾಂತಾ ಕವಡಿಮಟ್ಟಿ ವಂದಿಸಿದರು. ಸಮಾರಂಭದ ಬಳಿಕ ಶಾಲಾ ಮಕ್ಕಳಿಂದ ಹಾಡು, ನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement