ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ: ನಾಳೆ ದೇಶಿ ಸಂಸ್ಕೃತಿಯ ನೃತ್ಯ ವೈಭವ

Rashmi Kasaragodu
Updated On : 31 Mar 2013, 11:59 am

ಗದಗ: ನಗರದ ಜ. ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಏ. 1ರಂದು ಸಂಜೆ 7 ಗಂಟೆಗೆ ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಮಹಾರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಜ. ತೋಂಟದ ಡಾ೤ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ 2113ನೇ ಶಿವಾನುಭವದಲ್ಲಿ ದೇಶದ 6 ರಾಜ್ಯಗಳ ಕಲಾವಿದರಿಂದ ದೇಶಿ ಸಂಸ್ಕೃತಿಯ ನೃತ್ಯಪ್ರದರ್ಶನ ನಡೆಯಲಿದೆ.
ಪ್ರತಿ 10 ನೃತ್ಯ ಕಲಾವಿದರಿರುವ ತಂಡಗಳಿಂದ ಮಹಾರಾಷ್ಟ್ರದ ಲಾವಣಿ, ಭಾರೂಡ ನೃತ್ಯ, ಗೊಂದಳಿ ನೃತ್ಯ, ರಾಜಸ್ಥಾನದ ಘಮರ ನೃತ್ಯ, ಕಾಲಬೇಲಿಯಾ ನೃತ್ಯ, ಭವಯಿ ನೃತ್ಯ, ಕರ್ನಾಟಕದ ಡೊಳ್ಳು ಕುಣಿತ, ಗುಜರಾತಿನ ಸಿದ್ದಿ ಘಮಾಲ ನೃತ್ಯ, ಛತ್ತೀಸಗಢದ ಪಂತಿ ನೃತ್ಯ, ಓರಿಸ್ಸಾದ ಛಾವೂ ನೃತ್ಯಗಳ ಪ್ರದರ್ಶನ ನಡೆಯಲಿದೆ. ನಗರದ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ದೇಶಿ ಸಂಸ್ಕೃತಿ ಕುರಿತು ಉಪನ್ಯಾಸ ನೀಡುವರು.
ವೈಶಿಷ್ಟ್ಯಪೂರ್ಣವಾದ ದೇಶಿ ಸಂಸ್ಕೃತಿಯ ನೃತ್ಯ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement