ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಎಸ್ವೈ ಅಭಿವೃದ್ಧಿ ಕಾರ್ಯ ಶ್ರೀರಕ್ಷೆ: ಶಿವಣ್ಣ

Rashmi Kasaragodu
Updated On : 31 Mar 2013, 12:00 pm

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 30
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಮೂರುವರೆ ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನವೊಲಿಸುವ ಕಾರ್ಯವನ್ನು ಮಾಡುವುದಾಗಿ ಕೆಜೆಪಿ ಗದಗ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ಮಹಾಂತಶೆಟ್ಟರ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಕೆಜೆಪಿ ಸಭೆಯಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ರೈತ ಘಟಕದ ಅಧ್ಯಕ್ಷರಾಗಿ ಅಂದಾನಗೌಡ ಕುಲಕರ್ಣಿ, ಕಾರ್ಯದರ್ಶಿಯಾಗಿ ಬಸವರಾಜ ಹೂಗಾರ ಹಾಗೂ ಕ್ಷೇತ್ರದ ಇತರ ಪದಾಧಿಕಾರಿಗಳ ನೇಮಕಾತಿ ಆದೇಶ ವಿತರಿಸಿ ಅವರು ನೀಡಿ ಮಾತನಾಡುತ್ತಿದ್ದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಧ್ಯಕ್ಷ ಹಾಗೂ ಪುರಸಭೆ ನೂತನ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಪಕ್ಷ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದರೂ ಯಡಿಯೂರಪ್ಪ ಅವರ ಕಾರ್ಯ ವೈಖರಿಯಿಂದ ಎಲ್ಲ ಪಕ್ಷಗಳಿಗೆ ಸರಿಸಮನಾಗಿ ಸೆಣಸಲಿದೆ. ಪಕ್ಷದ ಟಿಕೆಟ್ ಯಾರಿಗೆ ದೊರೆತರೂ ಎಲ್ಲರೂ ಒಮ್ಮತದಿಂದ ಕಾರ್ಯ ಮಾಡಬೇಕೆಂದು ಹೇಳಿದರು. ಮುಖಂಡ ಶಿವಣ್ಣ ಡಂಬಳ, ಐ.ಎಚ್. ಮಿಯ್ಯಾನವರ, ಈರಣ್ಣ ವಾರದ, ಪುರಸಭೆ ಮಾಜಿ ಸದಸ್ಯ ಕಾರಡಗಿ, ತಿರುಕಪ್ಪ ಯಲಗಚ್ಚಿನ, ಮಲ್ಲಪ್ಪ ಅಂಕಲಿ, ಪಿ. ರಮೇಶ, ಬಸವರಾಜ, ರವಿ ವಾರದ, ವಾಸು ಬೋಮಲೆ, ಶೇಖಣ್ಣ ಗೋಡಿ, ಗೌಸುಸಾಬ ಕಾರಡಗಿ ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement