ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಸಭೆ
ಗದಗ: ಶುಕ್ರವಾರ ನಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅಧ್ಯಕ್ಷತೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳ ಸಭೆ ಕರೆಯಲಾಯಿತು.
ಸಭೆಯಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ರೂಟ್ ಮ್ಯಾಪ್, ಮತಗಟ್ಟೆಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮತಗಟ್ಟೆಗಳ ಭಾವಚಿತ್ರಗಳ ಸಮೇತ ವರದಿ ಸಲ್ಲಿಸುವ ಜತೆಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಣಾಮಕಾರಿಯಾಗಿ ಚುನಾವಣಾ ಜರುಗಿಸುವ ದಿಶೆಯಲ್ಲಿ ಎಲ್ಲ ಸೆಕ್ಟರ್ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. ಮಾದರಿ ನೀತಿ ಸಂಹಿತೆ ಪಾಲನಾ ತಂಡ, ಸಂಚಾರಿ ದಳ ತಂಡ (ಫ್ಲೈಯಿಂಗ್ ಸ್ಕ್ವಾಡ್), ವಿಡಿಯೋ ವೀವಿಂಗ್ ತಂಡ, ಚುನಾವಣಾ ಲೆಕ್ಕ ಪರಿಶೀಲನಾ ತಂಡಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಅವರುಗಳಿಗೆ ಚುನಾವಣಾಧಿಕಾರಿಗಳು ತಮಗೆ ನಿರ್ವಹಿಸಿದ ಚುನಾವಣಾ ಕಾರ್ಯವನ್ನು ಪರಿಣಾಮಕಾರಿ,ಅಚ್ಚುಕಟ್ಟಾಗಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಜರುಗಿಸುವುದರ ಜತೆಗೆ ಕಾಲ ಕಾಲಕ್ಕೆ ಅಗತ್ಯ ವರದಿ ಸಲ್ಲಿಸಲು ತಿಳಿಸಿದರು.