ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

'ಕೋಟ್ಯಧಿಪತಿ' ಹುಸೇನ ಭಾಷಾಗೆ ಗದಗನಲ್ಲಿ ಸನ್ಮಾನ

Vishwanath S
Updated On : 5 May 2013, 11:38 am

ಕನ್ನಡಪ್ರಭ ವಾರ್ತೆ, ಗದಗ, ಮೇ 4
ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಜ. ತೋಂಟದಾರ್ಯ ಮಠದ ಸಿ.ಎಂ.ಎನ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹುಸೇನ ಭಾಷಾ ಸುವರ್ಣ ವಾಹಿನಿ ನಡೆಸುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೋಟಿ ಗೆದ್ದ ನಿಮಿತ್ತ ಗದುಗಿನ ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಜ. ತೋಂಟದ ಡಾ೤ ಸಿದ್ಧಲಿಂಗ ಶ್ರೀಗಳು ಹುಸೇನ್ ಭಾಷಾ ಸನ್ಮಾನಿಸಿ ಮಾತನಾಡಿ, ಬಡತನದಲ್ಲಿಯೇ ಬೆಳೆದ ಹುಸೇನ್ ಭಾಷಾ ಕಾಲೇಜಿನ ಶುಲ್ಕ ಕಟ್ಟಲೂ ತೊಂದರೆಯಲ್ಲಿದ್ದ. ಬೆಂಗಳೂರಿಗೆ ಹೋಗಿ ಲಾರಿ ಕ್ಲೀನರ್ ಕೆಲಸ ಮಾಡಿ ಓದು ಮುಂದುವರಿಸಿದ್ದಾನೆ. ದೇವರೇ ಈತನಿಗೊಂದು ಉತ್ತಮ ಅವಕಾಶ ಒದಗಿಸಿದ್ದಾನೆ. ಕೋಟಿವೀರನಾಗಿ ತೋಂಟದಾರ್ಯ ಮಠದ ವಿದ್ಯಾಪೀಠಕ್ಕೆ ಹೆಸರು ತಂದಿದ್ದಾನೆ. ಈ ವಿದ್ಯಾರ್ಥಿ ಅಲ್ಪಸಂಖ್ಯಾತನಾಗಿದ್ದರೂ ಜೀವನ-ಸಾಧನೆಯಲ್ಲಿ ಬಹುಸಂಖ್ಯಾತರಿಗಿಂತ ಮುಂದೆ ಬರಬೇಕು ಎಂದರು.
ಹುಸೇನ್ ಭಾಷಾ ಮಾತನಾಡಿ, ತನ್ನಂತಹ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಯನ್ನು ಬೆಂಬಲಿಸುತ್ತಿರುವ ಶ್ರೀಗಳಿಗೆ, ಕಾಲೇಜು ಸಿಬ್ಬಂದಿಗೆ, ಈ ಸಮಾಜ, ಸುವರ್ಣ ಚಾನೆಲ್‌ಗೆ ಧನ್ಯವಾದ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement