ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಿ.ಬಿ. ಶ್ರೀನಿವಾಸ್‌ಗೆ ನುಡಿನಮನ

Vishwanath S
Updated On : 5 May 2013, 11:35 am

ಗಜೇಂದ್ರಗಡ: ಈಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್‌ರಿಗೆ ಡಾ. ರಾಜ್‌ಕುಮಾರ ಅಭಿಮಾನಿಗಳು ಬಸವೇಶ್ವರ ವೃತ್ತದಲ್ಲಿರುವ ರಾಜ್ ಹೋಟಲ್‌ನಲ್ಲಿ ನುಡಿ ನಮನ ಸಲ್ಲಿಸಿದರು. ಶ್ರೀನಿವಾಸ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ಬಳಿಕ ಮಾತನಾಡಿದ ಡಾ. ರಾಜ್ ಅಭಿಮಾನಿ ಸಂಗಪ್ಪ ಯಲಬುಣಚಿ, ಪಿಬಿಶ್ರೀ ಭಾರತ ಚಿತ್ರರಂಗ ಕಂಡ ಅಮೋಘ ಗಾಯಕ ಜತೆಗೆ ಸಾಹಿತ್ಯ ರಚನೆಕಾರರಾಗಿದ್ದರು. ಅವರು ಹಲವಾರು ಭಾಷೆಯ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ್ದಲ್ಲದೆ, ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ ಮುಂತಾದ ಮೇರು ನಟರಿಗೆ ಶಾರೀರ ಒದಗಿಸಿದ್ದರು. ಶ್ರೀನಿವಾಸ್ ಅಗಲಿಕೆಯಿಂದ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕೇಂದ್ರ ಸರ್ಕಾರ ಡಾ. ಪಿ.ಬಿ. ಶ್ರೀನಿವಾಸ್ ಸೇವೆ ಗುರ್ತಿಸಿ ಮರಣೊತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ವೀರೇಶ ಹಡಪದ, ಕಳಕಪ್ಪ ಹಡಪದ, ಚಂದ್ರು ಮುಶಿಗೇರಿ, ಮಂಜು ಕಲಾಲ್, ನರಸಿಂಹ ಕಲಾಲ್, ಬಾಳಪ್ಪ ಅರಗಂಜಿ, ಪರಸಪ್ಪ ಮಡಿವಾಳರ, ಶಂಕರಸಾ ಮೆಹರವಾಡೆ, ಮುತ್ತಪ್ಪ ಯಲಬುಣಚಿ, ಅಜಿತ್ ನಾವಡೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement