ಮೂರ್ತಿ ಭಗ್ನ: ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 4
ಪಟ್ಟಣದ ಚಿತ್ರಗಾರ ಓಣಿಯಲ್ಲಿರುವ ಭರಮ ದೇವರು ಹಾಗೂ ನಾಗಲಿಂಗೇಶ್ವರ ಗದ್ದುಗೆ ಮುಂದೆ ಮದ್ಯಪಾನದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಒಂದು ಧರ್ಮವನ್ನು ಹೀಯಾಳಿಸಿ, ಮೂರ್ತಿಗಳನ್ನು ಭಗ್ನಗೊಳಿಸಿದ ಅನ್ಯ ಕೋಮಿನ ಯುವಕನೋರ್ವನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಸಂಘಟನೆ ಯುವಕರು ಶುಕ್ರವಾರ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದು ಕೋಮು ಸೌಹಾರ್ದತೆ ಕದಡುವ ಯತ್ನವಾಗಿದೆ. ಸಮಸ್ತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯತ್ನ ಮಾಡಿದ್ದು, ಕೂಡಲೇ ಈತನ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಶಿಕ್ಷೆ ನೀಡುವಂತೆ ಹಿಂದೂ ಸಂಘಟನೆ ಯುವಕರು ಸಿಪಿಐ ಸಿದ್ಧನಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಂ.ಬಿ. ಕುಲಕರ್ಣಿ, ರವಿ ಹೊಂಗಲ, ರಮೇಶ ಮೋಟಿ, ವಿ.ಬಿ. ಕಾಪಸ್ಸೆ, ಆರ್.ಎಸ್. ಪಾಟೀಲ, ಎಸ್.ವಿ. ಪಾಟೀಲ, ಯೋಗೀಶ ಪಾಟೀಲ, ವಿನಾಯಕ ಬೆಳಮಕರ, ಅಕ್ಷಯ ಜೋಶಿ, ಮುತ್ತು ಹೂಗಾರ, ವಿಠಲ ದಿವಟಗಿ, ಸಂಜು ನಲವಿಡಿ, ಮಂಜುನಾಥ ಪಲ್ಲೆದ, ಕೆ.ಸಿ. ಶಿಂದೋಗಿಮಠ, ಮಂಜುನಾಥ ಬೋವಿ, ಶರಣು ಘಾಟಿಗೆ, ವಿಜಯಕುಮಾರ ಮುಧೋಳ, ಕಲ್ಲೇಶ ಜಗಾಪುರ ಮುಂತಾದವರು ಹಾಜರಿದ್ದರು.