ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುಪಿಎಸ್‌ಸಿ: ಜಲರಡ್ಡಿ 232ನೇ ರ್ಯಾಂಕ್

Vishwanath S
Updated On : 5 May 2013, 11:38 am

ಕನ್ನಡಪ್ರಭ ವಾರ್ತೆ, ಗದಗ, ಮೇ 4
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2012ರ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಸಾಧಿಸಿರುವ ತಾಲೂಕಿನ ದುಂದೂರು ಗ್ರಾಮದ ಜಗುನಾಥರಡ್ಡಿ ನಿಂಗರಡ್ಡಿ ಜಲರಡ್ಡಿ ಅವರು, 232ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡು, ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.
ಈಗಾಗಲೇ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗೆಡೆಹೊಂದಿರುವ ಜಗುನಾಥರಡ್ಡಿ ಜಲರಡ್ಡಿ ಜಮಖಂಡಿಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಐಎಎಸ್ ತೇರ್ಗೆಡೆಯಾಗುವ ಕನಸನ್ನು ಕಂಡಿದ್ದ ಇವರು, ಸತತ 3 ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿ 4ನೇ ಬಾರಿಗೆ ಉತ್ತಮ ಫಲಿತಾಂಶದೊಂದಿಗೆ ಹೊರಹೊಮ್ಮಿದ್ದಾರೆ.
1 ರಿಂದ 7 ತರಗತಿಯ ವರೆಗೆ ದುಂದೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ಅವರು, 8-10ರ ವರೆಗೆ ಹುಲಕೋಟಿ ಗ್ರಾಮದ ಎಸ್‌ಆರ್‌ಎಜಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ್ದಾರೆ. ಗದಗ ನಗರದ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದು 5 ಗೋಲ್ಡ್ ಮೆಡಲ್ ಗಳಿಸಿದ್ದಾರೆ. ಜಿಕೆವಿಕೆದಲ್ಲಿ ಎಂಎಸ್ಸಿ ಪದವಿ ಮುಗಿಸಿ, 3 ಗೋಲ್ಡ್ ಮೆಡಲ್ ಪಡೆದು ಕೀರ್ತಿಗೆ ಪಾತ್ರರಾಗಿದ್ದಾರೆ. ಜಗುನಾಥರಡ್ಡಿ ಅವರ ತಂದೆಯವರಾದ ನಿಂಗರಡ್ಡಿ ಅವರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ 2008ರಲ್ಲಿ ನಿವೃತರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement