ಚುನಾವಣೆಯ ಹೈಲೈಟ್ಸ್..
*ಬೆಳಗ್ಗೆ 7 ಗಂಟೆಗೆ ಜಿಲ್ಲಾದ್ಯಂತ ಪ್ರಾರಂಭವಾದ ಮತದಾನ.
* ರೋಣ ತಾಲೂಕಿನ ಹೊಸಳ್ಳಿಯಲ್ಲಿನ ಮತಯಂತ್ರ ದೋಷ ಅರ್ಧ ಗಂಟೆ ವಿಳಂಬವಾದ ಮತದಾನ.
* ಜಿಲ್ಲಾದ್ಯಂತ 7 ರಿಂದ 9.30ರ ವರೆಗೆ ಮತದಾನದಲ್ಲಿ ನೀರಸ ಪ್ರತಿಕ್ರಿಯೆ.
* 10 ಗಂಟೆಯ ವೇಳೆಗೆ ರಂಗು ಪಡೆದುಕೊಂಡ ಮತದಾನ ಪ್ರಕ್ರಿಯೆ.
* ಗದಗ-ಬೆಟಗೇರಿಯ 2 ಭಾಗಗಳಲ್ಲಿ ಮತದಾರರಿಗೆ ಹಂಚಲು ಬಳಸುತ್ತಿದ್ದ ರು. 45 ಸಾವಿರ ಚುನಾವಣಾಧಿಕಾರಿಗಳಿಂದ ವಶ.
* ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಮತ ಚಲಾಯಿಸದೇ ಮತದಾನದಿಂದ ದೂರ.
* ನರೇಗಲ್ಲದಲ್ಲಿ 11ರಿಂದ 1ಗಂಟೆಯ ವರೆಗೆ ಕೈಕೊಟ್ಟ ಸಿಸಿ ಕ್ಯಾಮರಾ, 2 ಗಂಟೆ ಮತದಾನ ಸ್ಥಗಿತ. ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.
* ಮತದಾರರಿಗೂ ಕಾಡಿದ ಬಿಸಿಲಿನ ಪ್ರಕರತೆ, ಇದರಿಂದಾಗಿ ಕೆಲಕಾಲ ಮತದಾನದಲ್ಲಿ ವಿಳಂಬ.
* ನೀರಿಗಾಗಿ ಹಾತೋರೆದ ಮತದಾರರು.
* ಚುನಾವಣೆಯ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ರಸ್ತೆಗಳು ಬಿಕೋ ಎಂದವು.
* 5 ಗಂಟೆಗೆ ಶಿರಹಟ್ಟಿ ತಾಲೂಕಿನ ಸುರೇಬಾನ್ ಗ್ರಾಮದ 171ನೇ ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ, ಮತದಾರರ ಆಕ್ರೋಶ.
* ಮುಳಗುಂದ ಪಟ್ಟಣದಲ್ಲಿಯೂ ಸ್ಥಗಿತಗೊಂಡ ಮತಯಂತ್ರ, ಮತದಾರರಿಂದ ಆಕ್ರೋಶ.
* ನರಗುಂದ ವಾರ್ಡ 11,12ರಲ್ಲಿ ಮತ ಚಲಾಯಿಸುವಂತೆ ಮತದಾರರಿಗೆ ಪ್ರೇರೆಪಣೆ.
* ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು.
* ಲಕ್ಷ್ಮೇಶ್ವರದ 15ನೇ ವಾರ್ಡನ ಗೋಸಾವಿ ಕುಟುಂಬದ 60ಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕಾರ, ಸಂಜೆ 5.55ರ ವೇಳೆಯ ಉಪತಹಸೀಲ್ದಾರ್ ಮನವೊಲಿಕೆಯಿಂದಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
* ಸಂಜೆ 6ಕ್ಕೆ ರೋಣದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪಕ್ಷದ ಬಾವುಟದ ವಿಷಯವಾಗಿ ವಾಕ್ಸಮರ, ಪರಿಸ್ಥಿತಿ ತಿಳಿಗೊಳಿಸಿದ ಬಿಎಸ್ಎಫ್ ಮತ್ತು ಪೊಲೀಸರು.