ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿಂದನೆ: ಭಜಂತ್ರಿ ಸಮುದಾಯ ಪ್ರತಿಭಟನೆ

Vishwanath S
Updated On : 6 May 2013, 10:38 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 5
ಹಿಂದುಳಿದ ಸಮುದಾಯ ವಾಸಿಸುವ ವಾರ್ಡ್ 17ರಲ್ಲಿ ಭೋವಿ ಸಮುದಾಯದ ಮಾರುತಿ ಕಲ್ಲೊಡ್ಡರ ಎಂಬವರು ಭಜಂತ್ರಿ ಸಮುದಾಯದ ಅನಿಲ ಭಜಂತ್ರಿ ಅವರನ್ನು ಮತದಾನ ಮಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ್ದಾರೆಂದು ಆರೋಪಿಸಿ ಭಜಂತ್ರಿ ಸಮುದಾಯದವರು ಮತದಾನ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿ, ಪ್ರತಿಭಟನೆಗೆ ಮುಂದಾದ ಘಟನೆ ಭಾನುವಾರ ನಡೆದಿದೆ.
ಪ್ರತಿ ಚುನಾವಣೆಯಲ್ಲಿ ಭಜಂತ್ರಿ ಸಮುದಾಯದ ಮೇಲೆ ಒಂದಿಲ್ಲೊಂದು ರೀತಿ ಅನ್ಯಾಯ ನಡೆಯುತ್ತಲೆ ಇದೆ. ನಮ್ಮ ನೋವಿಗೆ ಸ್ಪಂದಿಸುವವರಿಲ್ಲ. ಸ್ವತಂತ್ರವಾಗಿ ಮತ ಚಲಾಯಿಸಲಾಗದೆ ಭಯದ ವಾತಾವರಣದಲ್ಲಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು. ಯುವಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ವರೆಗೆ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ ಎಸ್.ಎಸ್. ಇಟೇಕರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸೂಕ್ತ ಕ್ರಮದ ಭರವಸೆ ನೀಡಿದರು. ಆದರೆ ಭಜಂತ್ರಿ ಸಮುದಾಯದವರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಬಡಾವಣೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ, ಹಲ್ಲೆ ಮಾಡಿದ ವ್ಯಕ್ತಿಯನ್ನು ಸ್ಥಳಕ್ಕೆ ಕರೆತಂದು ವಿಚಾರಿಸಿದರು. ಆತ, ಹಲ್ಲೆ ಮಾಡಿದ್ದು ನಿಜವೆಂದು ಒಪ್ಪಿ ಕ್ಷಮಾಪಣೆ ಕೇಳಿದ ಮೇಲೆ ಭಜಂತ್ರಿ ಸಮುದಾಯದವರು ಶಾಂತರಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement