ರಕ್ತದಾನದಿಂದ ಜೀವದಾನ: ಡಾ. ಪವಾಡ ಶೆಟ್ಟರ್
ಗದಗ: ಅಪಘಾತ, ಹೆರಿಗೆ ಸಮಯ, ಇನ್ನಿತರ ಅವಶ್ಯಕ ಸಂದರ್ಭಗಳಲ್ಲಿ ರಕ್ತ ಕಡಿಮೆಯಿದ್ದಾಗ ಶಕ್ತಿವಂತರು ರಕ್ತ ನೀಡಿ ಇನ್ನೊಬ್ಬರ ಜೀವ ಉಳಿಸಿ ಜೀವದಾನ ಮಾಡಬೇಕು ಎಂದು ಗದುಗಿನ ಐಎಂಎ ಅಧ್ಯಕ್ಷ ಡಾ. ಆರ್.ಟಿ.ಪವಾಡಶೆಟ್ಟರ್ ಹೇಳಿದರು.
ಈಚೆಗೆ ಅವರು ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ರಕ್ತ ತಪಾಸಣೆ ಹಾಗೂ ರಕ್ತದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹಲವು ಸಂದರ್ಭಗಳಲ್ಲಿ ರಕ್ತ ದೊರೆಯದೆ ರಕ್ತದ ಕೊರತೆಯಿಂದ ಮಾನವನ ಜೀವವೇ ಹೋದ ಘಟನೆಗಳು ಸಂಭವಿಸಿವೆ. ಕಾರಣ ಜಾಗೃತ ನಾಗರಿಕರು ರಕ್ತದಾನ ನೀಡಲು ಯೋಗ್ಯ ಆರೋಗ್ಯವನ್ನು ಹೊಂದಿದವರು ರಕ್ತದಾನ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು. ರಕ್ತದಾನ ಶಿಬಿರದಲ್ಲಿ 73 ಜನರು ರಕ್ತದಾನ ಮಾಡಿದರು. ಶಿಬಿರದಲ್ಲಿ ಡಾ. ಅನಂತ ಶಿವಪುರ, ಡಾ. ಶ್ವೇತಾ ಸಂಕನೂರ, ಡಾ. ರೇಣುಕಾ, ಗದುಗಿನ ಐಎಂಎದ ರಿಯಾಜ್, ಕಲೀಲ್, ಹಿರೇಮಠ, ರಾಜೇಸಾಬ, ಡಾ. ಎಸ್.ವಿ. ತೋಟಗಂಟಿಮಠ ಇದ್ದರು.
ಜ. ತೋಂಟದಾರ್ಯ ಮಹೋತ್ಸವದ ಅಧ್ಯಕ್ಷ ಕೆ.ಎಸ್. ಚೆಟ್ಟಿ, ಮುರುಘರಾಜೇಂದ್ರ ಬಡ್ನಿ, ಕಿಶನ್ ಮೇರವಾಡೆ, ಅಮರೇಶ ಅಂಗಡಿ, ರಾಚಪ್ಪ ಮುನವಳ್ಳಿ, ಗಂಗಾಧರ ಹಿರೇಮಠ, ಬಾಲಚಂದ್ರ ಭರಮಗೌಡ್ರ, ಶಿವಕುಮಾರ ಶೆಟ್ಟರ್, ಡಾ. ಪ್ರಕಾಶ ಹುಬ್ಬಳ್ಳಿ, ಪ್ರಕಾಶ ಗುಗ್ಗರಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಕೆ.ಎಚ್. ಬೇಲೂರ, ಚೇತನ ಅಂಗಡಿ, ಅಕ್ಕಮಹಾದೇವಿ ಚೆಟ್ಟಿ, ನಿರ್ಮಲಾ ಪಾಟೀಲ, ವೀರಣ್ಣ ಬೇವಿನಮರದ ಪಾಲ್ಗೊಂಡಿದ್ದರು.