ಇಂದಿನಿಂದ ಶಾಲಾ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ
ಗದಗ: ತಾಲೂಕಿನಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮೇ 8ರಿಂದ 22ರ ವರೆಗೆ ಯೋಗ, ರಂಗೋಲಿ, ಸಮೂಹ ಗೀತೆ, ಸಮೂಹ ನೃತ್ಯ, ರಂಗ ತರಬೇತಿ, ಚಿತ್ರಕಲೆ ಚಟುವಟಿಕೆಗಳ ಉಚಿತ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
ಆಸಕ್ತರು ಮೇ 7ರಂದು ಸಂಜೆ 5ರ ಒಳಗೆ ರಾಜೇಶ್ವರಿ ಕಲಾ ಕುಟೀರ, ವರವಿ ಆಸ್ಪತ್ರೆ ಎದುರಿಗೆ ರೇಣುಕಾ ನಗರ, ಮುಳಗುಂದ ರೋಡ್, ಗದಗ ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ. 08372-253319, ಮೊ. 9743817941 ಸಂಪರ್ಕಿಸಬೇಕೆಂದು ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.