101 ಕಾಯಿ ಒಡೆದು ಹರಕೆ ತೀರಿಸಿದ ಜಿ.ಎಸ್. ಪಾಟೀಲ್
ರೋಣ: ರೋಣ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲರು ಗುರುವಾರ ಪಟ್ಟಣದ ದಾವಲ್ಮಲಿಕ್ ದರ್ಗಾಕ್ಕೆ ತೆರಳಿ ದರ್ಶನ ಪಡೆದು, 101 ಕಾಯಿ ಒಡೆಯುವುದರ ಮೂಲಕ ತಮ್ಮ ಹರಕೆ ತೀರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ದಾವಲ್ಮಲಿಕ್ ದರ್ಗಾಕ್ಕೆ ತಂದೆಯೊಡನೆ ಬಂದು 101 ಕಾಯಿ ಒಡೆಸುವುದಾಗಿ ಜಿ.ಎಸ್. ಪಾಟೀಲ ಪುತ್ರ ಹಾವೇರಿ ಲೋಕಸಭೆ ಕಾಂಗ್ರೆಸ್ ಯುವ ಉಪಾಧ್ಯಕ್ಷ ಮಿಥುನ್ ಪಾಟೀಲ ಹರಕೆ ಹೊತ್ತಿದ್ದರಂತೆ, ಜಿ.ಎಸ್. ಪಾಟೀಲ್ ಜಯಗಳಿಸಿದ್ದು, ಅದರಂತೆ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಎಸ್. ಪಾಟೀಲ ಮಾತನಾಡಿ, ಪುತ್ರ ಮಿಥುನ್ ಪಾಟೀಲ ದಾವಲ್ಮಲಿಕ್ ದರ್ಗಾಕ್ಕೆ ಬಂದು ಗೆಲುವಿಗಾಗಿ ಸಂಕಲ್ಪ ಮಾಡಿದ್ದರು. ಅದರಂತೆ ದೇವರ ಆಶೀರ್ವಾದ ಹಾಗೂ ಜನತೆಯ ಬೆಂಬಲದಿಂದ ಗೆಲವು ಸಾಧಿಸಿದ್ದೇನೆ. ರೋಣ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವೆ ಎಂದರು. ಪುರಸಭೆ ಸದಸ್ಯ ಶಫೀಕ ಮೂಗನೂರ, ಮಿಥುನ್ ಪಾಟೀಲ, ಪುರಸಭೆ ಸದಸ್ಯೆ ಯಮನವ್ವ ಜಮ್ಮನಕಟ್ಟಿ, ದಾವಲ್ಮಲಿಕ ಮಕಾನ್ ಕಮಿಟಿ ಅಧ್ಯಕ್ಷ ದಾವಲಸಾಬ ಬಿಲ್ಲುಖಾನ, ಅಬ್ದುಲ್ಅಜೀಜ ಶಿರೂರ, ಕುತ್ಬುದ್ದೀನ ಜಲಾವರ, ಯೂಸೂಫ ಇಟಗಿ, ಸಂಗು ನವಲಗುಂದ, ಬಸವರಾಜ ನವಲಗುಂದ, ಫಕೀರಸಾಬ ಕೋಲ್ಕಾರ, ಫಕೀರಸಾಬ ಇದ್ಲಿ, ಭವಾಣಿ ಬೇಟಗೇರಿ, ಬಸೀರಸಾಬ ದೇಶಾಯಿ, ಎಚ್.ಎಚ್. ಇಟಗಿ, ಮುಸ್ತಫ ಖಾಜಿ, ಅಬ್ದುಲ್ಸಾಬ ಮದರಂಗಿ, ಮಹಮ್ಮದರಫಿಕ ನಧಾಪ್, ಸುರೇಶ ಜಗ್ಗಲ, ಕೆ.ಕೆ. ಮುಲ್ಲಾ ಮುಂತಾದವರು ಉಪಸ್ಥಿತದ್ದರು.