ಮೃತರ ಕುಟುಂಬಸ್ಥರಿಗೆ ಜಿ.ಎಸ್. ಪಾಟೀಲ್ ಸಾಂತ್ವನ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 9
ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಿ.ಎಸ್. ಪಾಟೀಲ ಗೆಲುವು ಸಾದಿಸಿದ ಬಳಿಕ ಬುಧವಾರ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿ, ಮರಳಿ ಸ್ವಗ್ರಾಮ ಗೋಗೆರಿಗೆ ತೆರಳುತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಡಾಬಾ ಬಳಿ ನಡೆದಿತ್ತು. ಗುರುವಾರ ಶಾಸಕ ಜಿ.ಎಸ್. ಪಾಟೀಲ್ ಗೋಗೇರಿ ಗ್ರಾಮಕ್ಕೆ ಭೇಟಿ ನೀಡಿ, ಈ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ ತಲಾ ರು. 25 ಸಾವಿರ ಪರಿಹಾರ ನೀಡಿ, ಸರ್ಕಾರದ ವತಿಯಿಂದ ಹೆಚ್ಚಿನ ಪರಿಹಾರದ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಘಟನೆ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಗದಗ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ, ವಿ.ಆರ್. ಗುಡಿಸಾಗರ, ವೀರಣ್ಣ ಸೊನ್ನದ, ಪ್ರಭು ಮೇಟಿ, ಯುಸೂಫ ಇಟಗಿ, ಸುಭಾನಸಾಬ ಆರಗಿದ್ದಿ, ಶ್ರೀಕಾಂತ ಅವಧೂತ, ಇಮಾಮಸಾಬ ಬಾಗವಾನ, ಎಂ.ಎಚ್. ಕೋಲಕಾರ, ಹನುಮಪ್ಪ ಹೊರಪೇಟಿ, ಹನುಮಪ್ಪ ಕೊಡಕೇರಿ, ಎಫ್.ಎಸ್. ಕರಿದುರಗನವರ ಮುಂತಾದವರು ಇದ್ದರು.