ಎಚ್ಕೆ ಗೆಲವು: ಚಂದಾವರಿ ಹರ್ಷ
ಗದಗ: ಮಾಜಿ ಸಚಿವ ಎಚ್.ಕೆ. ಪಾಟೀಲರಿಗೆ ಗದಗ ಕ್ಷೇತ್ರದಲ್ಲಿ ದೊರೆತ ಗೆಲುವು ಪ್ರಾಮಾಣಿಕತೆ, ಜನಪರ ಕಾಳಜಿಯ ಜಯವೆಂದು ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಲ್.ಡಿ. ಚಂದಾವರಿ ಹೇಳಿದರು.
ಗದಗ ವಿಧಾನಸಭೆ ಚುನಾವಣೆಯಲ್ಲಿ ಎಚ್ಕೆ ಪಾಟೀಲ ಜಯ ಗಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ರಾಜೀವಗಾಂಧಿ ನಗರದಲ್ಲಿ ಆಚರಿಸಲಾದ ವಿಜಯೋತ್ಸವದಲ್ಲಿ ಪಾಲ್ಗೊಂಡ ಚಂದಾವರಿ, ಪಾಟೀಲರ ತೇಜೋವಧೆಗೆ ವಿರೋಧಿಗಳು ಯತ್ನಿಸಿದರೂ ಅವರ ಆಟ ನಡೆಯಲಿಲ್ಲ. ಅಪಪ್ರಚಾರಕ್ಕೆ ಬಲಿಯಾಗದೆ ಜಾತಿಗಿಂತ ನೀತಿ ಮೇಲು ಎಂದು ಎಚ್ಕೆ ನಿರೂಪಿಸಿದರು. ಗದಗ ಜಿಲ್ಲೆ ಇತಿಹಾಸದಲ್ಲೇ ಗರಿಷ್ಠ ಅಂತರದ ಜಯ ಗಳಿಸಿದರು. ಇದು ಜನತೆಯ ಪ್ರಜ್ಞಾವಂತಿಗೆಗೆ ನಿದರ್ಶನ ಎಂದರು.
ಎಚ್ಕೆ ಸಜ್ಜನ ರಾಜಕಾರಣಿ. ಗದಗ ಪರಿಸರದಲ್ಲಿ ಇನ್ನಷ್ಟು ವಿಧಾಯಕ ಹಾಗೂ ಜನಪರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವಲ್ಲಿ ಇದು ಪೂರಕವಾಗಲಿದೆ ಎಂದು ಬಣ್ಣಿಸಿದರು.
ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ರವಿ ದಂಡಿನ, ಎಸ್.ಕೆ. ಪಾಟೀಲ, ರವಿ ರಂಗನಗೌಡರ, ಅಯ್ಯಪ್ಪ ನಾಯ್ಕರ, ಸಿ.ಕೆ. ಮಾಳಶೆಟ್ಟಿ, ಹಾಜಿ ಇಸ್ಮಾಯಿಲಸಾಬ ಬೋದ್ಲೆಖಾನ, ನಿಸ್ಸಾರ ಅಹ್ಮದ ಖಾಜಿ, ಗಣಿಸಾಬ ರೋಣ, ಅನಿಲ ಸಿಂಗಟಾಲಕೇರಿ, ಶಿವರಾಜ ಕೋಟಿ, ಸಂಗಪ್ಪ ಪಲ್ಲೇದ, ರಮೇಶ ಕೋಳೂರ, ಟೀಪುಸಾಬ ಹುಬ್ಬಳ್ಳಿ, ರಿಯಾಜ ಡಂಬಳ, ಯೂಸುಫ ಡಂಬಳ, ಮೌಲಸಾಬ ಗುಡಿಸಲಮನಿ, ಈರಣ್ಣ ಹುಂಬಿ, ಈರಣ್ಣ ತಳಕಲ, ಎಸ್.ಎಫ್. ಅಂಗಡಿ, ಮಲ್ಲಿಕಾರ್ಜುನ ಮಾಳೆಕೊಪ್ಪ, ನಾಸಿರ ಬಳ್ಳಾರಿ, ರಜಾಕಸಾಬ ಕಟ್ಟಿಮನಿ, ರಾಜೇಸಾಬ ಶೇಖ, ಸಲೀಂ ಹಣಗಿ, ಯಲ್ಲಪ್ಪ ವಿಭೂತಿ, ಪರಶುರಾಮ ನರಗುಂದ, ಹೂವಪ್ಪ ಚಂದಾವರಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.