ಇಂದು ಸ್ಲಂ ಸಮಿತಿ ಪದಾಧಿಕಾರಿಗಳ ಸಭೆ
ಗದಗ: ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳ ಸಭೆಯನ್ನು ಮೇ 12ರಂದು ಬೆಳಗ್ಗೆ 10 ಗಂಟೆಗೆ, ಜಿಲ್ಲಾ ಸ್ಲಂ ಸಮಿತಿ ಕಾರ್ಯಾಲಯ ನಂ. 8 ಜೆ.ಪಿ. ಕಾಂಪ್ಲೆಕ್ಸ್, ಕೋರ್ಟ್ ರಸ್ತೆ ಗದಗನಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ ವಹಿಸುವರು. ಸಭೆಯಲ್ಲಿ ಸಮಿತಿಯ ಶಾಖೆ ಸಮಿತಿಗಳ ರಚನೆ ಮಾಡುವುದು, ಸ್ಲಂ ಘೋಷಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಹೋರಾಟ ನಡೆಸಲು ಮತ್ತು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಾರಣ ಜಿಲ್ಲಾ, ಮಹಿಳಾ, ಯುವ, ಶಾಖೆ ಸಮಿತಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.