ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇನಾಮದಾರ ರಾಜಿನಾಮೆ

Vishwanath S
Updated On : 12 May 2013, 10:58 am

ಗಜೇಂದ್ರಗಡ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರಾಭವ ಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಡಾ. ಆನಂದ ಇನಾಮದಾರ ಸೋಲಿನ ನೈತಿಕ ಹೊಣೆ ಹೊತ್ತು ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಳಿಕ ಮಾತನಾಡಿದ ಅವರು, ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದರು.

ಇಂದು ಉಪನ್ಯಾಸ
ಗದಗ: ಬಸವದಳದ 1019ನೇ ಶರಣ ಸಂಗಮ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ ಗದಗ ಬಸವದಳ ಗದಗ-ಬೆಟಗೇರಿ ಇವುಗಳ ಆಶ್ರಯದಲ್ಲಿ ಬಸವ ಜಯಂತಿಯ ಅಂಗವಾಗಿ ಶರಣರು ಕಂಡ ಬಸವಣ್ಣ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಮೇ 12ರ ಬೆಳಗ್ಗೆ 11.30 ಗಂಟೆಗೆ ಸ್ಥಳೀಯ ಶಿವಾನಂದ ನಗರದ ಬಸವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವದಳದ ಪ್ರಕಟಣೆ ತಿಳಿಸಿದೆ.

ಇಂದು ಸಮಾರೋಪ
ನರಗುಂದ: ಪಟ್ಟಣದ ವಿರಕ್ತಮಠದ ಲಿಂ. ಚನ್ನಬಸವ ಶ್ರೀಗಳ 144ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮೇ 12ರಂದು ಬೆಳಗ್ಗೆ 10.30 ಗಂಟೆಗೆ ಅಂತೂರ-ಬೆಂತರಿನ ಕುಮಾರ ದೇವರು ನಡೆಸಿಕೊಟ್ಟ ಅರಿವು-ಆಚಾರ ಪ್ರವಚನದ ಸಮಾರೋಪ ಸಮಾರಂಭ ಹಾಗೂ ಸಾಮೂಹಿಕ ವಿವಾಹಗಳು ಪಟ್ಟಣದ ವಿರಕ್ತಮಠದಲ್ಲಿ ಜರುಗಲಿದೆ. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿ ಶ್ರೀಗಳು, ರಾಯನಾಳ ವಿರಕ್ತಮಠದ ಮಹಾಂತ ಶ್ರೀಗಳು, ಪತ್ರಿವನ ಮಠದ ಸಿದ್ದವೀರ ಶ್ರೀಗಳು, ಸಿಂಧನಕೇರಾ ವಿರಕ್ತಮಠದ ಹೊನ್ನಲಿಂಗ ಶ್ರೀಗಳು, ಬನಹಟ್ಟಿ ಸೋಲಬಯ್ಯ ಶ್ರೀಗಳು, ಶಿವಾನಂದ ಶ್ರೀಗಳು, ಚನ್ನಬಸವ ಶ್ರೀಗಳು ಪಾಲ್ಗೊಳ್ಳುವರು.

ಮಲ್ಲಮ್ಮ ಜಯಂತಿ
ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವವನ್ನು ಮುಳಗುಂದ ಸಮೀಪದ ಚಿಂಚಲಿ ಗ್ರಾಮದಲ್ಲಿ ರಡ್ಡಿ ಸಮಾಜ ಬಂಧುಗಳು ಆಚರಿಸಿದರು. ಡೊಳ್ಳು ಮಜಲು, ಕರಡಿ ಮಜಲು ವಾದ್ಯ ಮೇಳಗಳೊಂದಿಗೆ ಮಹಿಳೆಯರ ಕುಂಬಮೇಳ ಹಾಗೂ ಆರತಿಗಳೊಂದಿಗೆ ಗ್ರಾಮದಲ್ಲಿ ಭಾವಚಿತ್ರ ಮೆರವಣಿಗೆ ಸಾಗಿತು. ಚನ್ನಬಸಪ್ಪ ಕತ್ತಿ, ಸೋಮಲಿಂಗಪ್ಪ ಬಾಲರಡ್ಡಿ, ಹೇಮಣ್ಣ ಬಾಲರಡ್ಡಿ, ಚನ್ನಪ್ಪಗೌಡ ಮರಿಲಿಂಗಪ್ಪನವರ, ಸಂಜು ಹಳಿಯಾಳ, ಗಂಗಪ್ಪ ಕತ್ತಿ, ಜಿ.ಆರ್. ಕತ್ತಿ, ವಿನಯ ಕತ್ತಿ, ಬುದ್ದಪ್ಪ ಕತ್ತಿ, ವಿರೂಪಾಕ್ಷಪ್ಪ ಕಾಮರಡ್ಡಿ, ಅಶೋಕ ದಂಡಿನ, ಗೂಳಪ್ಪ ಬಾಲರಡ್ಡಿ, ಲಿಂಗರಾಜ ಕತ್ತಿ, ಎಲ್.ಜಿ. ಕತ್ತಿ, ನಿಂಗಪ್ಪ ಲಾಳಗರಡ್ಡಿ, ಷಣ್ಮುಖಪ್ಪ ಬಾಲರಡ್ಡಿ, ಶಶಿಧರ ಕತ್ತಿ, ರವಿ ಕತ್ತಿ, ಎನ್.ಎಂ. ಅರಮನಿ, ಮಹೇಶ ಬಾಲರಡ್ಡಿ, ಆರ್.ಬಿ. ಕಾಮರಡ್ಡಿ, ನಿಂಗಪ್ಪ ತೇರಿನಗಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement