ಔಷಧ ವ್ಯಾಪಾರಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ
ಕನ್ನಡಪ್ರಭ ವಾರ್ತೆ, ಗದಗ, ಮೇ 12
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರು ಬಂದ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾ ಔಷಧ ವ್ಯಾಪಾರಸ್ಥರು ಸಾಂಕೇತಿಕ ಬಂದ ಆಚರಿಸಿ ಬೈಕ್ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಶ ನಿಡಗುಂದಿ ಮಾತನಾಡಿ, ಕೇಂದ್ರ ಸರ್ಕಾರದ ನ್ಯಾಯ ಸಮ್ಮತವಲ್ಲದ ನೀತಿಯಿಂದ ಔಷಧ ವ್ಯಾಪಾರಸ್ಥರಿಗೆ ತೀವ್ರ ಅನ್ಯಾಯವಾಗುತ್ತಿದೆ. ಔಷಧದ ವಿತರಣೆಯಲ್ಲಿ ದೇಶದ 25 ಲಕ್ಷ ಕುಟುಂಬಗಳು ನಿರತರಾಗಿರುವುದರಿಂದ ಔಷಧಿಯ ವಹಿವಾಟನ್ನು ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ರೆಡ್ಡಿ, ಬಸವರಾಜ ದಡೂತಿ, ಎಂ.ಬಿ. ರಮಾನಿ, ನಾಗೇಶ ಹುಬ್ಬಳ್ಳಿ, ಸಂಜೀವ ರೆಡ್ಡಿ, ಎಸ್.ಜಿ. ಆನೆಗುಂದಿ, ಶಿವು ಆನೆಗುಂದಿ, ಎಚ್.ಡಿ. ಚಿಕೇನಕೊಪ್ಪ, ಪ್ರಕಾಶ ನಾಲ್ವಾಡ, ವಿನೋದ ಜೈನ, ಆರ್.ಜಿ. ಆನೆಗೊಂದಿ, ಎಂ.ಡಿ. ಕಬಾಡಿ, ಜ್ಞಾನೇಶ್ವರ ಖೋಖಲೆ, ಆರ್.ಐ. ನದಾಫ, ವಿ.ಎಸ್. ಯಾವಗಲ್ ಮುಂತಾದವರು ಹಾಜರಿದ್ದರು.