ವಿ.ಸಿ. ಪ್ರೌಢಶಾಲೆಗೆ ಶೇ. 96ರಷ್ಟು ಫಲಿತಾಂಶ
ರೋಣ: ಸ್ಥಳೀಯ ರಾಜೀವ್ಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯು 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಫಲಿತಾಂಶ ಪಡೆದಿದೆ ಎಂದು ಮುಖ್ಯೋಪದ್ಯಾಯಿನಿ ಪ್ರಮಿಳಾ ತೋಟಗಂಟಿ ತಿಳಿಸಿದ್ದಾರೆ.
ಪರೀಕ್ಷೆಗೆ ಕುಳಿತ ಒಟ್ಟು 63 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 33 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 15 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿ ಮತ್ತು 13 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ಭೀಮಮ್ಮ ಚಲವಾದಿ ಶೇ.85.92ರಷ್ಟು ಅಂಕ ಪಡೆದು ಪ್ರಥಮ, ಬಸವರಾಜೇಶ್ವರಿ ಅಂಗಡಿ ಶೇ.85.76ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ದೀಪಾ ಕಂಬಿ 84.32ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.