ಶಾರದಾ ಪ್ರೌಢಶಾಲೆಗೆ ಶೇ. 100ರಷ್ಟು ಫಲಿತಾಂಶ
ರೋಣ: ಸ್ಥಳೀಯ ಮಡಿವಾಳ ಮಾಚೀದೇವ ವಿದ್ಯಾ ಸಂಸ್ಥೆಯ ಶಾರದಾ ಬಾಲಕಿಯರ ಪ್ರೌಢ ಶಾಲೆಯು 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡಿದೆದೆ ಎಂದು ಮುಖ್ಯೋಪಾದ್ಯಾಯ ಆರ್.ಬಿ. ಮಡಿವಾಳರ ತಿಳಿಸಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 44 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದಾರೆ. 3 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 25 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 10 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿ ಮತ್ತು 6 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಧಿಕಾ ಬೋಮಕಾರ ಶೇ 92 ರಷ್ಟು ಅಂಕ ಪಡೆದು ಪ್ರಥಮ, ಅರ್ಚನಾ ಬಾಕಳೆ ಶೇ 90 ರಷ್ಟು ಅಂಕ ಪಡೆದು ದ್ವೀತಿಯ ಸ್ಥಾನ ಮತ್ತು ರೇಖಾ ವಕ್ಕರ ಶೇ 89 ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಲ್ಮೇಶ್ವರ ಕಾಲೇಜಿಗೆ ಶರಣಬಸಪ್ಪ ಕಲ್ಲನಗೌಡ್ರ ಪ್ರಥಮ
ಹೊಳೆಆಲೂರ: ಶ್ರೀ ಕಲ್ಮೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯದ ಪಿಯು ಫಲಿತಾಂಶ ಶೇ. 61.53 ಬಂದಿದೆ. ಶರಣಬಸಪ್ಪ ಕಲ್ಲನಗೌಡ್ರ ಶೇ. 83.33 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಒಟ್ಟು 171 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 109 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲಕ್ಷ್ಮೀ ಬರಡಿ ಶೇ. 79 ಅಂಕ ಪಡೆದು ದ್ವಿತೀಯ, ಎಚ್.ಎಂ. ಬೆಳವಟಗಿ ಶೇ. 76.67 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.