ಅರ್ಜಿ ಆಹ್ವಾನ
ಗದಗ: ಬೆಂಗಳೂರಿನ ರಾಜಾಜಿ ನಗರದ ವಿಂದ್ಯಾ ಪೌಂಡೇಶನ್‌ನ ಅಡಿಯಲ್ಲಿ ಜಿಲ್ಲೆಯ ನಿರುದ್ಯೋಗಿ ವಿದ್ಯಾವಂತ ವಿಕಲಚೇತನರಿಗೆ ಉದ್ಯೋಗ ಅವಕಾಶಕ್ಕಾಗಿ ಅರ್ಜಿ ಕರೆಯಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಯಾವುದೇ ಪದವಿ ಪಡೆದ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವವರು ಮತ್ತು ಬೆಂಗಳೂರಿನಲ್ಲಿ ವಾಸಿಸಲು ಸಿದ್ದವಾಗಿರುವ ವಿಕಲಚೇತನರು ಮೇ 25 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಳಾಸ ಎಸ್.ಪಿ. ಅಣಗೌಡ್ರ ಕೇರ್ ಆಫ್ ಸಿ.ಎಸ್. ಗ್ರಾಮಪುರೋಹಿತ ಮಾಜಿ ಸಂಸ್ಥಾಪಕ ಅಧ್ಯಕ್ಷರು ರೋಣ ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ನರೇಗಲ್ಲ. ಪಪಂ ಕಾಂಪ್ಲೆಕ್ಸ್ ಕಾಲೇಜು ರೋಡ್ ನರೇಗಲ್ಲ ಇವರಲ್ಲಿ ದೊರೆಯುವ ಅರ್ಜಿ ಪಾರ್‌ಂಗಳನ್ನು ತುಂಬಿ ಕಳುಹಿಸಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಎಸ್.ಪಿ. ಅಣಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.