ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

19ರಂದು ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ

Lingaraj Badiger
Updated On : 16 May 2013, 11:59 am

ಗದಗ: ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಸೋಮೇಶ್ವರ ಗೆಳೆಯರ ಬಳಗದಿಂದ ಸೋಮೇಶ್ವರ ಜಾತ್ರೆಯ ನಿಮಿತ್ತ ಮೇ 19ರ ಬೆಳಗ್ಗೆ 8 ಗಂಟೆಗೆ ರಾಜ್ಯ ಮಟ್ಟದ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಉದ್ಘಾಟಕರಾಗಿ ಎಚ್. ನರಸಿಂಹಮೂರ್ತಿ ಆಗಮಿಸುವರು. ಹೊಸಳ್ಳಿಯ ಬೂದೀಶ್ವರ ಶ್ರೀಗಳು, ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 10 ಗ್ರಾಂ ಬಂಗಾರ ಹಾಗೂ ರು. 10 ಸಾವಿರ ನಗದು, ದ್ವಿತೀಯ ಬಹುಮಾನ 5 ಗ್ರಾಂ ಬಂಗಾರ ಹಾಗೂ ರು. 5 ಸಾವಿರ ನಗದು, ತೃತಿಯ ಬಹುಮಾನ 5 ಗ್ರಾಂ ಬಂಗಾರ, 4ನೇ ಬಹುಮಾನ 2.5 ಗ್ರಾಂ ಬಂಗಾರ ಹಾಗೂ 2500 ನಗದು, 5ನೇ ಬಹುಮಾನ 10 ತೊಲೆ ಬೆಳ್ಳಿ ಕಡಗ ನೀಡಲಾಗುತ್ತಿದ್ದು, ಆಸಕ್ತರು ಮೊ. 9886974837, 7849179049 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಗದಗ: 2013-14ನೇ ಸಾಲಿಗೆ ಹಿಂದಿ ಶಿಕ್ಷಕ ಟ್ರೈನಿಂಗ್ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. 18 ರಿಂದ 40 ವರ್ಷ ವಯಸ್ಸು (ಎಸ್‌ಸಿ, ಎಸ್‌ಟಿ-42 ವರ್ಷ) ಒಳಗಿರುವವರು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಹಿಂದಿ ಪದವಿ ಪರೀಕ್ಷೆಗಳಾದ ವಿದ್ವಾನ್, ರತ್ನ, ಪ್ರವೀಣ್ ಪರೀಕ್ಷೆಗಳಲ್ಲಿ ಪದವಿ ಪಡೆದಿರುವ ಬಿಎ ಪದವಿಯಲ್ಲಿ ಹಿಂದಿ ಭಾಷೆಯನ್ನು ಐಚ್ಛಿಕ ವಿಷಯವಾಗಿ, ಹಿಂದಿ ಎಂಎ ಪದವಿಯೊಂದಿಗೆ ಶೇ. 50 (ಎಸ್‌ಸಿ, ಎಸ್‌ಟಿ ಶೇ. 45) ರಷ್ಟು ಅಂಕಗಳನ್ನು ಪಡೆದಿರುವವರು ಜೂನ್ 20 ರೊಳಗೆ ಅರ್ಜಿ ನಮೂನೆಯನ್ನು ಪ್ರಾಂಶುಪಾಲರು, ಹಿಂದಿ ಶಿಕ್ಷಕ ಟ್ರೈನಿಂಗ್ ಕಾಲೇಜ್, ಕರ್ನಾಟಕ ಹಿಂದಿ ಸಭಾ ಹಿಂದಿ ಭವನ ಜಿಪಂ ಕಚೇರಿ ಎದುರು ಮಂಡ್ಯ, ಇಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 08232-226667, 9448268114 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement