ಅನ್ನದಾನೇಶ್ವರ ಕಾಲೇಜಿಗೆ ಉತ್ತಮ ಫಲಿತಾಂಶ
ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು 2012-13ನೇ ಸಾಲಿನ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದು, ಕಾಲೇಜಿನ ಒಟ್ಟು ಫಲಿತಾಂಶ ಶೇ. 84.66ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 494 ವಿದ್ಯಾರ್ಥಿಗಳಲ್ಲಿ 418 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 14 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದು, ಇವರಲ್ಲಿ 7 ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಕಲಾ ವಿಭಾಗದಿಂದ 3 ಜನ ಹಾಗೂ ವಿಜ್ಞಾನ ವಿಭಾಗದಿಂದ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 169 ವಿದ್ಯಾರ್ಥಿಗಳು ಪ್ರಥಮ, 123 ದ್ವಿತೀಯ ಹಾಗೂ 85 ವಿದ್ಯಾರ್ಥಿಗಳು ತೃತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಿಂದ 7 ಜನ ವಿದ್ಯಾರ್ಥಿಗಳಲ್ಲಿ ಗೀತಾ ಕೆಂಪಣ್ಣವರ 541 (ಶೇ. 90.16)ಅಂಕ ಪಡೆದು ಪ್ರಥಮ ಸ್ಥಾನ. ಮಮತಾ ಕುಲಕರ್ಣಿ 540 (ಶೇ. 90)ಅಂಕದೊಂದಿಗೆ ದ್ವಿತೀಯ, ಕವಿತಾ ಹೊಸಮನಿ 536 (ಶೇ. 89.33) ಅಂಕದೊಂದಿಗೆ ತೃತೀಯ ಸ್ಥಾನ, ನಾಗರಾಜ ಬಡಿಗೇರ ಶೇ. 87.16, ಶರಣಮ್ಮ ಅವ್ವನ್ನವರ ಶೇ. 87, ಕನಕಪ್ಪ ವತ್ತಿ ಶೇ. 87, ಶ್ವೇತಾ ವಕ್ಕಾರ ಶೇ. 85.16 ಅಂಕ ಪಡೆದು ಪ್ರಶಸ್ತಿ ಸಹಿತ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಿಂದ ಸುನೀಲ ಗಾಣಿಗೇರ ಶೇ. 90.66 ಅಂಕದೊಂದಿಗೆ ಪ್ರಥಮ, ರಾಧಾ ಕಟ್ಟಿಮನಿ ಶೇ. 89.16 ಅಂಕದೊಂದಿಗೆ ದ್ವಿತೀಯ ಹಾಗೂ ವಿದ್ಯಾಧರ ಶಿರಗುಂಪಿ ಶೇ. 88.83 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಿಂದ ಲಿಂಗರಾಜ ಮುಗಳಿ ಶೇ. 88.50 ಅಂಕದೊಂದಿಗೆ ಪ್ರಥಮ, ಹನುಮಗೌಡ ಬಿಂಗಿ 86.83 ಅಂಕದೊಂದಿಗೆ ದ್ವಿತೀಯ ಹಾಗೂ ಹನುಮಪ್ಪ ಧನೋಜಿ 86.33 ಅಂಕದೊಂದಿಗೆ ತೃತೀಯ ಸ್ಥಾನ ಹಾಗೂ ವೀರೇಶ ಅಂಗಡಿ 85.83 ಅಂಕದೊಂದಿಗೆ ಚತುರ್ಥ ಸ್ಥಾನ ಪಡೆದಿದ್ದಾರೆ. ಹೀಗೆ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಲಕೇರೆಯ ಅನ್ನದಾನ ಶ್ರೀಗಳು, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಪ್ರಾಚಾರ್ಯ ವೈ.ಸಿ. ಪಾಟೀಲ, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಎಸ್‌ಪಿಗೆ ಸಚಿವ ಸ್ಥಾನ ನೀಡಲು ಆಗ್ರಹ
ರೋಣ: ಅನುಭವಿ ರಾಜಕಾರಣಿ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕು ಅಲ್ಪಸಂಖ್ಯಾತರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ತಾಲೂಕು ಅಲ್ಪ ಸಂಖ್ಯಾತರ ಮುಖಂಡ ಕೆ.ಬಿ. ಹರ್ಲಾಪುರ, ಇನಾಯತ ದರಫದಾರ, ಯೂಸೂಫ ಇಟಗಿ, ಖಲೀಲ ರಾಮದುರ್ಗ, ಇಕ್ಬಾಲ್ ಯಲಿಗಾರ, ರಹಿಮಾನ ಗದಗ, ಪೈಜ ಕಲಾದಗಿ, ಬಿ.ಎಂ. ಕೊಪ್ಪಳ, ಶಫೀಕ ಮಬೂಗನೂರ, ಮಕ್ತುಮ ಮುಲ್ಲಾ, ಇಸ್ಮಾಯಿಲ ಹೊರಪೇಟಿ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.