ಉತ್ತಮ ಫಲಿತಾಂಶ
ನರೇಗಲ್ಲ: ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ ಫಲಿತಾಂಶವು ಶೇ. 100ಕ್ಕೆ 100ರಷ್ಟಾಗಿದೆ. ಪರೀಕ್ಷೆಗೆ ಕುಳಿತ 63 ವಿದ್ಯಾರ್ಥಿನಿಯರಲ್ಲಿ 9 ಡಿಸ್ಟಿಂಕ್ಷನ್, 33 ಪ್ರಥಮ ಸ್ಥಾನ, 8 ದ್ವಿತೀಯ ಸ್ಥಾನ, 13 ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಅಮೃತಾ ನಿರಂಜನ 584 (ಶೇ. 93.44) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ, ಚೇತನಾ ಕಿನ್ನಾಳ 565 ಅಂಕಗಳನ್ನು ಪಡೆದು (ಶೇ.90.40) ಶಾಲೆಗೆ ದ್ವಿತೀಯ, ದಿವ್ಯಾ ಬಂಡಿವಡ್ಡರ 564 ಅಂಕಗಳನ್ನು (ಶೇ. 90.24) ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಪರೀಕ್ಷೆಗೆ ಕುಳಿತ 63 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಈ ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಭಿನವ ಅನ್ನದಾನ ಶ್ರೀಗಳು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಹಿರೇಮಠ, ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಶಾಲಾ ಆಡಳಿತ ಮಂಡಳಿಯ ಚೇರಮನ್ ಎ.ವಿ. ಪಾಟೀಲ ಮತ್ತು ಸದಸ್ಯರು, ಮುಖ್ಯೋಪಾಧ್ಯಯ ಎ.ಟಿ. ಮಳ್ಳಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಸಲ್ಲಿಸಿದ್ದಾರೆ.