ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸವ ಜಯಂತಿ: ಮಜ್ಜಿಗೆ ವಿತರಣೆ

Lingaraj Badiger
Updated On : 16 May 2013, 11:59 am

ನರಗುಂದ: ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ಪಟ್ಟಣದ ರಾಚೋಟಿ ವೀರಭದ್ರೇಶ್ವರ ಟ್ರೇಡರ್ಸ್ ಮತ್ತು ಕರವೇ ಆಶ್ರಯದಲ್ಲಿ ಮಜ್ಜಿಗೆ, ಚಾಕಲೇಟ್ ವಿತರಸುವ ಮೂಲಕ ಬಸವಣ್ಣನವರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷ ಚನ್ನು ನಂದಿ ಮಾತನಾಡಿ, ಪ್ರತಿವರ್ಷ ಸರ್ಕಾರ ಮಟ್ಟದಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಆದರೆ, ಸರಿಯಾಗಿ ಈ ಜಯಂತಿಯ ಬಗ್ಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಮಾಡದೇ ಇರುವುದರಿಂದ ಹೆಚ್ಚು ಜನರು ಈ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಹನುಮಂತ ಮಜ್ಜಿಗೊಡೆ, ವಾಸು ಹೆಬ್ಬಾಳೆ, ಮನೋಹರ ಹುಯಿಲಗೋಳ, ರಾಘವೇಂದ್ರ ಗುಜಮಾಗಡಿ, ರವಿ ನಾಗಠಾಣ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement