ಗುರೂಜಿ ಜನ್ಮದಿನ: ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ, ಗದಗ, ಮೇ 16
ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿಯವರ ಜನ್ಮದಿನಾಚರಣೆ ನಿಮಿತ್ತ ಗದುಗಿನ ಆರ್ಟ್ ಆಫ್ ಲಿವಿಂಗ್ ಸಮಿತಿಯಿಂದ ಸ್ಥಳೀಯ ಐಎಂಎ ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆರ್ಟ್ ಆಫ್ ಲಿವಿಂಗ್ನ ಗದಗ ಸಮಿತಿಯ ಅಧ್ಯಕ್ಷ ಡಾ. ಅನಂತ ಶಿವಪುರ ಮಾತನಾಡಿ, ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾಗಿದೆ. ಇತ್ತೀಚೆಗೆ ರಕ್ತದಾನದ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡುತ್ತಿದ್ದು, ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡುವಂತೆ ಕಾರ್ಯ ಪ್ರವೃತ್ತರಾಗಲು ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು ಅವಶ್ಯಕವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪವಿತ್ರ ನಾಡಗೌಡ ಮಾತನಾಡಿ, ಸೇವಾ ಕಾರ್ಯಗಳಿಗೆ ಹೆಸರಾದ ರವಿಶಂಕರ ಗುರೂಜಿಯವರ ಜನ್ಮ ದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ಏರ್ಪಡಿಸಿರುವದು ಶ್ಲಾಘನೀಯ ಎಂದರು. ಡಾ. ರಾಜಶೇಖರ ಪವಾಡಶೆಟ್ಟರ, ರಿಯಾಜ ಹಾಗೂ ಖಲೀಲರವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಗದುಗಿನ ಆರ್ಟ್ ಆಫ್ ಲಿವಿಂಗ್ ಸದಸ್ಯೆ ಡಾ. ವಾಣಿ ಶಿವಪುರ, ಬಲರಾಮ ಬಸವಾ, ಅಶ್ವಥ ಸುಲಾಖೆ, ಡಾ. ಸಂಜೀವ ರಾಶಿನಕರ, ಡಾ. ಸಿದ್ದಲಿಂಗ ನಾಡಗೌಡ, ಪ್ರಭು ನೀಲಗುಂದ, ರವಿ ಪವಾರ, ಸಲೀಂ ಮುಳಗುಂದ, ಮುಂತಾದವರು ರಕ್ತದಾನ ಮಾಡಿದರು.