ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾ ಕಸಾಪದಿಂದ ಸಿಎಂ, ಶಾಸಕರಿಗೆ ಅಭಿನಂದನೆ

Mainashree
Updated On : 17 May 2013, 10:21 am

ಕನ್ನಡಪ್ರಭ ವಾರ್ತೆ, ಗದಗ, ಮೇ 16
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾಗೂ ಜಿಲ್ಲೆಯ 4 ಕ್ಷೇತ್ರಗಳ ಶಾಸಕರಿಗೆ ಈಚೆಗೆ ಗದಗ ತಾಪಂ ಆವರಣದಲ್ಲಿನ ಕಸಾಪ ಕಚೇರಿಯಲ್ಲಿ ಕಸಾಪದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಸಿದ್ದರಾಮಯ್ಯ 4 ದಶಕಗಳಿಂದ ಸಮಾಜದಲ್ಲಿರುವ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿ ಜತೆಗೆ ವಿಶೇಷವಾಗಿ ದೀನ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ರೈತರ ಅಭಿವೃದ್ಧಿಯ ಕನಸಿನೊಂದಿಗೆ ಕಾರ್ಯನಿರ್ವಹಿಸಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರು, ಎಚ್.ಕೆ. ಪಾಟೀಲರು ರಾಜಕೀಯದಲ್ಲಿ ಸ್ವತಂತ್ರವಾಗಿ ಬೆಳೆದರು. 4 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಜಲ ಸಂಪನ್ಮೂಲ, ಕಾನೂನು, ಜವಳಿ, ಕೃಷಿ ಇತ್ಯಾದಿ ಖಾತೆಗಳ ಸಚಿವರಾಗಿ ಜನೋಪಯೋಗಿ ಕಾರ್ಯ ಮಾಡಿದ್ದಾರೆ. ಮೊದಲ ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಗದಗ ಪರಿಸರದ ಜನತೆ ಸಂತೋಷಗೊಂಡಿದ್ದಾರೆ ಎಂದರು.
ಕಸಾಪ ಉಪಾಧ್ಯಕ್ಷ ಪ್ರೊ. ಸಿ.ಜಿ. ಹುಡೇದಗಡ್ಡಿ, ಜಿ.ಎಸ್. ಪಾಟೀಲರು ರೋಣ ಕ್ಷೇತ್ರಕ್ಕೆ ಮೂರು ಬಾರಿ ಶಾಸಕರಾಗಿ ಹಲವಾರು ಜನಪರ ಹಾಗೂ ಅಭಿವೃದ್ಧಿಪರ ಕಾರ್ಯ ನಿರ್ವಹಿಸಿದ್ದಾರೆ. ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಸಾವಿರ ಕೆರೆಗಳ ನಿರ್ಮಾಣದ ಸರದಾರರಾಗಿ ರೈತರಿಗೆ ಆಶಾಕಿರಣವಾಗಿದ್ಧಾರೆ. ಜತೆಗೆ ಕಸಾಪದೊಂದಿಗೆ 4 ದಶಕಗಳಿಂದ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ ಎಂದರು.
ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಶಿರಹಟ್ಟಿಯ ನೂತನ ಶಾಸಕ ರಾಮಕೃಷ್ಣ ದೊಡ್ಡಮನಿಯವರ ವ್ಯಕ್ತಿತ್ವ ಕುರಿತು ಹಾಗೂ ಕಸಾಪ ಸಂಘಟನಾ ಕಾರ್ಯದರ್ಶಿ ಎಂ.ಕೆ. ಲಮಾಣಿ ನರಗುಂದ ಶಾಸಕ ಬಿ.ಆರ್. ಯಾವಗಲ್‌ರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡರ, ಮಲ್ಲಿಕಾರ್ಜುನ ಪೂಜಾರ, ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ, ಕಿಶೋರಬಾಬು ನಾಗರಕಟ್ಟಿ, ಪಿ.ಸಿ. ಕಲಹಾಳ, ಪ್ರೊ. ಅಂದಾನಶೆಟ್ಟರ, ಎಸ್.ಬಿ. ಹಿರೇಮಠ, ಪ್ರೊ. ಜಿ.ಎಸ್. ಯತ್ನಟ್ಟಿ, ರಮೇಶ ಸಜ್ಜಗಾರ, ಕಾಶೀನಾಥ ಶಿರಬಡಗಿ ಮುಂತಾದವರು ಪಾಲ್ಗೊಂಡಿದ್ದರು.
c

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement