ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೊಜನೂರ: ದೇವಿ ವಿಗ್ರಹ ಪತ್ತೆ

Vishwanath S
Updated On : 19 May 2013, 11:23 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 18
ಮನೆ ಕಟ್ಟಲು ಭೂಮಿಯನ್ನು ಅಗೆಯುತ್ತಿರುವಾಗ ದೇವಿಯ ವಿಗ್ರಹ ಪತ್ತೆಯಾದ ಘಟನೆ ಶನಿವಾರ ಬೆಳಗ್ಗೆ ಸಮೀಪದ ಗೊಜನೂರು ಗ್ರಾಮದಲ್ಲಿ ನಡೆದಿದೆ.
ಗೊಜನೂರ ಗ್ರಾಮದ ದ್ಯಾಮಣ್ಣ ಬಸಪ್ಪ ಕಮ್ಮಾರ ಹಾಗೂ ಬಸನಗೌಡ ನಿಂಗನಗೌಡ ಪಾಟೀಲ ಎನ್ನುವವರ ಮನೆಯ ಮಧ್ಯೆ ಗೋಡೆ ಕಟ್ಟುವ ಸಲುವಾಗಿ ಭೂಮಿ ಅಗೆಯುತ್ತಿರುವಾಗ ಸುಮಾರು 5 ಅಡಿಯ ದೇವಿಯ ಮೂರ್ತಿ ಭೂಮಿಯಲ್ಲಿ ಸಿಕ್ಕು ಗ್ರಾಮದಲ್ಲಿ ಒಂದು ತರಹ ಕುತೂಹಲ ವಾತಾವರಣ ಮೂಡಿಸಿತು.
ವಿಗ್ರಹವು ನಿಂತ ಭಂಗಿಯಲ್ಲಿದ್ದು, ಬಲ ಹಸ್ತವು ಅಭಯ ನೀಡುವ ರೀತಿಯಲ್ಲಿದೆ. ಎಡಗೈ ದುಂಡನೆಯ ವಸ್ತುವೊಂದನ್ನು ಹಿಡಿದುಕೊಂಡ ಭಂಗಿಯಲ್ಲಿದೆ. ತಲೆಯ ಮೇಲೆ 5 ದಳದ ಹೂವು ಅರಳಿರುವ ಪ್ರಭಾವಳಿ ರೀತಿಯಲ್ಲಿ ಕೆತ್ತಲಾಗಿದೆ. ಸೀರೆಯನ್ನು ಉಟ್ಟುಕೊಂಡು 5-6 ಮಡಿಕೆಗಳನ್ನು ಮಾಡಿ ನಡುವಿನ ಭಾಗಕ್ಕೆ ಕಟ್ಟಿಕೊಂಡ ರೀತಿ ಮನ ಮೋಹಕವಾಗಿದೆ. ಕೊರಳಲ್ಲಿ ಸರಗಳು ಮತ್ತು ಕಿವಿಯಲ್ಲಿ ಕಿವಿಯೋಲೆಗಳು ಕಂಡು ಬರುತ್ತಿವೆ.
ಆ ವಿಗ್ರಹವನ್ನು ತೊಳೆದು ಪೂಜೆ, ಪುನಸ್ಕಾರ ಮಾಡಲಾಯಿತು.  ಈ ವಿಗ್ರಹ ಯಾವುದು ಎನ್ನುವ ಮಾಹಿತಿ ನಿಖರವಾಗಿ ತಿಳಿದು ಬಂದಿಲ್ಲ. ಸುಮಾರು 4-5 ಶತಮಾನಗಳ ಹಿಂದೆ ಈ ವಿಗ್ರಹವನ್ನು ಕೆತ್ತಿರುವ ಬಗ್ಗೆ ಅಂದಾಜಿಸಲಾಗುತ್ತಿದೆ. ಹಾಗೂ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡದೆ ನೆಲದಲ್ಲಿ ಹೂತು ಇಟ್ಟಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪ್ರಾಚ್ಯವಸ್ತು ಇಲಾಖೆಯಿಂದ ಇದರ ಮಾಹಿತಿ ಗೊತ್ತಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement