ಸ್ವರಚಿತ ಕವನ, ಲೇಖನಗಳಿಗೆ ಅಹ್ವಾನ
ಗದಗ: ಜೂನ್ ತಿಂಗಳಲ್ಲಿ ನಡೆಯುವ ಗದಗ ತಾಲೂಕು ಕಸಾಪ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ತಮ್ಮ ಅತ್ಯುತ್ತಮವಾದ, ಚಿಕ್ಕದಾದ ಕವನವನ್ನು ಸ್ಪಷ್ಟವಾಗಿ ಬರೆದು ಕಳುಹಿಸಬೇಕು. ಅದರಂತೆ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಸ್ಮರಣ ಸಂಚಿಕೆಗಾಗಿ ಗದಗ ತಾಲೂಕಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಾಗಿ ಪರಿಚಯಾತ್ಮಕ ಲೇಖನಗಳನ್ನು ಅಹ್ವಾನಿಸಲಾಗಿದೆ. ಇಚ್ಛಿತ ಲೇಖಕರು 2 ಪುಟಗಳಿಗೆ ಮೀರದಂತೆ ಸ್ಪಷ್ಟವಾಗಿ ಬರೆದು ತಮ್ಮ ಹೆಸರು, ವಿಳಾಸ, ಇತ್ತೀಚಿನ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಮೇ 24 ರೊಳಗೆ ಪ್ರೊ. ಕಿಶೋರಬಾಬು ನಾಗರಕಟ್ಟಿ, ಅಧ್ಯಕ್ಷರು ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಪಂಚಾಕ್ಷರ ನಗರ 3ನೇ ಅಡ್ಡ ರಸ್ತೆ ಗದಗ. ಈ ವಿಳಾಸಕ್ಕೆ ಕಳಿಸಲು ಕೋರಿದೆ. ಮಾಹಿತಿಗಾಗಿ ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು. ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ (ಮೊ.9845956302) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಗದಗ: ಕನ್ನಡ ಪುಸ್ತಕ ಪ್ರಾಧಿಕಾರವು 2010ನೇ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002, ದೂರವಾಣಿ ಸಂಖ್ಯೆ 080-22484516, 22107704 ಸಂಪರ್ಕಿಸಬಹುದು.